ಇದೇ ಆ. 14ರಂದು ಅಕ್ಷಯ್ಕುಮಾರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ನಟನೆಯ ‘ಬ್ರದರ್ಸ್’ ಚಿತ್ರ ತೆರೆಗೆ ಬಂದಿದೆ. ಇದು ಹಾಲಿವುಡ್ನ ‘ವಾರಿಯರ್’ ಚಿತ್ರದ ರಿಮೇಕ್ ಎಂಬುದು ನಿಮಗೆ ತಿಳಿದಿರುವಂಥದ್ದೇ.
ಸದ್ಯದ ಸಂಗತಿ ಏನೆಂದರೆ, ಈ ‘ವಾರಿಯರ್’ ಚಿತ್ರವೀಗ ತಮಿಳು, ತೆಲುಗಿಗೂ ರಿಮೇಕ್ ಆಗುವ ತಯಾರಿಯಲ್ಲಿದೆ. ತಮಿಳಿನ ಸೂರ್ಯ ಮತ್ತು ಕಾರ್ತಿ ತೆರೆ ಮೇಲೂ ಅಣ್ಣ-ತಮ್ಮನಾಗಿ ಕಾಣಿಸಿಕೊಳ್ಳಲಿದ್ದಾರಂತೆ! ಜೊತೆಗೆ ತೆಲುಗಿನಲ್ಲಿ ರಾಮ್ರಣ್ ತೇಜ, ಪ್ರಭಾಸ್ ನಟಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದಕ್ಕಾಗಿಯೇ ‘ಬ್ರದರ್ಸ್’ ಚಿತ್ರ ನಿರ್ವಿುಸಿರುವ ಎಂಡಮೋಲ್ ಇಂಡಿಯಾ ಸಂಸ್ಥೆ ದಕ್ಷಿಣ ಭಾರತದ ಈ ಖ್ಯಾತ ನಟರಿಗೆ ‘ಬ್ರದರ್ಸ್’ ಚಿತ್ರ ವೀಕ್ಷಣೆ ಮಾಡಲು ಕೋರಿಕೊಂಡಿದೆ ಯಂತೆ. ಅದೆಲ್ಲ ಬಿಡಿ, ಇದರ ನಡುವೆ ಮತ್ತೂ ಒಂದು ಅಚ್ಚರಿಯ ಸುದ್ದಿಯಿದೆ. ಹಿಂದಿಯಲ್ಲಿ ಜಾಕಿ ಶ್ರಾಫ್ ನಿರ್ವಹಿಸಿರುವ ಪಾತ್ರಕ್ಕಾಗಿ ನಟ ವಿಕ್ರಮ್ ಮೊರೆ ಹೋಗಿದ್ದಾರಂತೆ ನಿರ್ವಪಕರು. ಅಭಿಮಾನಿಗಳಂತೂ ತೆರೆ ಮೇಲೆ ಸೂರ್ಯ-ಕಾರ್ತಿ ಜೋಡಿಯನ್ನು ನೋಡಲು ಕಾತರರಾಗಿದ್ದಾರೆ.