ರಾಷ್ಟ್ರೀಯ

ಅಂಡಾಣು ಉಳಿಸಿ ಬಂಜೆತನ ಹೋಗಲಾಡಿಸಿ

Pinterest LinkedIn Tumblr

andanu-fiಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ ಸಂತಾನೋತ್ಪತ್ತಿಯ ಪ್ರಮಾಣ ಕುಂಠಿತವಾಗುತ್ತದೆ. ತಡವಾದ ತಾಯ್ತನದಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾದಂತೆ ಗರ್ಭವತಿಯಾಗುವ ಸಂಭವವೂ ಕಡಿಮೆ. ಒಂದೊಮ್ಮೆ ಆದರೂ ಅದರಲ್ಲಿ ಸಮಸ್ಯೆಗಳು ಹೆಚ್ಚು. 30 ವರ್ಷದ ನಂತರ ಗರ್ಭವತಿಯಾದರೆ ಗರ್ಭಪಾತವಾಗುವ ಸಂಭವವೂ ಹೆಚ್ಚು. ಮಹಿಳೆಯ ವಯಸ್ಸು ಇಲ್ಲಿ ತುಂಬ ಮುಖ್ಯವಾಗುತ್ತದೆ.

ಇತ್ತೀಚೆಗೆ ಮಹಿಳೆಯರು ಮಕ್ಕಳಾಗುವ ಸಂದರ್ಭಗಳನ್ನು ಮುಂದೂಡುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಗರ್ಭನಿರೋಧಕಗಳನ್ನು ಬಳಸುತ್ತಾರೆ. ಇದರಿಂದಲೇ ವಯಸ್ಸಾಗುತ್ತಿದ್ದಂತೆ ಗರ್ಭಧರಿಸುವ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಆಗ ಬಂಜೆತನ ಕಾಡುವುದು ಸಹಜ. ಆದರೆ ಇತ್ತೀಚಿನ ಆಧುನಿಕ ತಂತ್ರಜ್ಞಾನವು ಇಂಥವರಿಗೆ ಅನೇಕ ರೀತಿಯಲ್ಲಿ ವರದಾನವಾಗಿದೆ. ಇದರಿಂದ ಮಹಿಳೆಗೆ ಸಾಕಷ್ಟು ಆಯ್ಕೆಗಳು ಸಿಕ್ಕು ಮಕ್ಕಳನ್ನು ಪಡೆಯುವಲ್ಲಿ, ಕುಟುಂಬವನ್ನು ಮುನ್ನಡೆಸಲು ಸಾಧ್ಯವಾಗುತ್ತಿದೆ. ಕೃತಕ ಗರ್ಭಧಾರಣೆ ತಂತ್ರಜ್ಞಾನ ಸಾಕಷ್ಟು ಕ್ಲಿಷ್ಟಕರ ಸಮಸ್ಯೆಗಳನ್ನೂ ಬಗೆಹರಿಸುತ್ತದೆ.

ತಡವಾದ ತಾಯ್ತನ ಅಥವಾ ಕ್ಯಾನ್ಸರ್​ಗಾಗಿ ಚಿಕಿತ್ಸೆ ಪಡೆಯಬೇಕೆನ್ನುವವರು ಅಂಡಾಣುವನ್ನು ಉಳಿಸಿಕೊಂಡು ಮುಂದೆ ಮಕ್ಕಳನ್ನು ಪಡೆಯುವ ವಿಧಾನ ಈಗ ಹೆಚ್ಚು ಚಾಲ್ತಿಯಲ್ಲಿದೆ. ಇದು ಹೆಚ್ಚು ಅನುಕೂಲಕರವೂ ಹೌದು. ಅಂಡಾಣುವನ್ನು ಶೀಥಲೀಕರಣಗೊಳಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಕ್ಯಾನ್ಸರ್​ನಿಂದ ಚಿಕಿತ್ಸೆಗಾಗಿ ವಿಕಿರಣವನ್ನು ಕೊಟ್ಟಾಗ ಅಂಡಾಶಯದ ಜೀವಕೋಶಗಳು ನಾಶವಾಗುವ ಸಂಭವವಿರುತ್ತದೆ. ಅಂಥವರು ಅಂಡಾಶಯದ ಜೀವಕೋಶಗಳನ್ನು ಮೊದಲೇ ಶೀಥಲೀಕರಣದ ವಿಧಾನದಿಂದ ಉಳಿಸಿಕೊಂಡು ಮುಂದೆ ಆರೋಗ್ಯವಂತ ಮಕ್ಕಳನ್ನು ಪಡೆಯಬಹುದು.

ತಡವಾದ ತಾಯ್ತನ ಅಥವಾ ಕ್ಯಾನ್ಸ್​ರ್​ಗಾಗಿ ಚಿಕಿತ್ಸೆಪಡೆಯುವುದಿದ್ದರೆ ಈ ವಿಧಾನ ಹೆಚ್ಚು ಪ್ರಯೋಜನಕಾರಿ. ಅಂಡಾಣುವನ್ನು, ಅಂಡಾಶಯದ ಭಾಗಗಳನ್ನು ಹಾಗೂ ಫಲಿತ ಭ್ರೂಣವನ್ನೇ ಶೀಥಲೀಕರಣ ಘಟಕದಲ್ಲಿ ಇರಿಸಿ, ಮುಂದೆ ಬೇಕಾದಾಗ ಮಕ್ಕಳನ್ನು ಪಡೆಯುವ ವಿಧಾನವಿದು.

ಕೃತಕ ಗರ್ಭಧಾರಣೆ ವಿಧಾನವು ಕೇವಲ ಕ್ಲಿಷ್ಟಕರ ಸಂಗತಿಗಳನ್ನು ಮಾತ್ರ ನಿಭಾಯಿಸುವುದಿಲ್ಲ, ಬದಲಾಗಿ ಕುಟುಂಬ ಯೋಜನೆಯನ್ನು ಯೋಜಿಸಲು ಕೂಡ ಆಯ್ಕೆಯಿರುತ್ತದೆ. ಹಲವಾರು ತಂತ್ರಜ್ಞಾನಗಳು ಇಂದಿವೆ. ಅದು ಅಂಡಾಣು, ಅಂಡಾಶಯದ ಅಂಗಾಂಶಗಳು, ಭ್ರೂಣವನ್ನು ಶೀಥಲೀಕರಣ ಮಾಡುವುದರಿಂದ ಹೆಚ್ಚಿನ ಮಹಿಳೆಯರಿಗೆ ಗರ್ಭಧಾರಣೆ ಇಂದು ಸಾಧ್ಯವಾಗುತ್ತಿದೆ. ಇದು ಅತ್ಯಾಧುನಿಕವಾದ ತಂತ್ರಜ್ಞಾವಾಗಿದೆ. ಅಂಡಾಣು ಹಾಗೂ ವೀರ್ಯಾಣುವನ್ನು ಬಾಡಿಗೆಯಾಗಿ ಪಡೆಯುವುದನ್ನೂ ಇದು ತಪ್ಪಿಸುತ್ತದೆ

ಬಂಜೆತನ ನಿವಾರಣಾ ತಜ್ಞರಾಗಿ ನಾವು ಅಂಡಾಣುವಿನ ಶೀಥಲೀಕರಣ ಪ್ರಕ್ರಿಯೆಯ ಬೆಲೆ, ಸುರಕ್ಷತೆ, ಖರ್ಚುವೆಚ್ಚ, ಮಾನಸಿಕ ಪರಿಣಾಮಗಳು, ಎಲ್ಲವನ್ನೂ ಮುಂಜಾಗ್ರತೆ ಕ್ರಮವಾಗಿ ರೋಗಿಗಳಿಗೆ ಹೇಳಬೇಕು ಎನ್ನುತ್ತಾರೆ ಡಾ. ಮಂಜು ನಾಯರ್. ಹಾಗಂತ ಇದೇ ಕಟ್ಟಕಡೆಯ ಪರಿಹಾರ ಎಂದೂ ಅಲ್ಲ. ಇದು ಕೂಡ ಒಂದು ಆಯ್ಕೆ ಇದೆ ಎಂಬುದನ್ನು ನಾವು ಹೇಳಬೇಕಾಗುತ್ತದೆ ಎನ್ನುತ್ತಾರೆ.

ಈ ರೀತಿ ಫಲವತ್ತತೆಯನ್ನು ಉಳಿಸುವುದು ನಿಜಕ್ಕೂ ತುಂಬ ಪರಿಣಾಮಕಾರಿಯಾದದ್ದು. ಮಣಿಪಾಲ್ ಅಂಕುರ್​ನಲ್ಲಿ ಇದನ್ನು ಸಾಬೀತುಪಡಿಸಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ಶೀಥಲೀಕರಣಗೊಳಿಸಿದ ಅಂಡಾಣು ಮತ್ತು ವೀರ್ಯಾಣುಗಳಿಂದ ಫಲಿತವಾಗಿ ಮಗು ಪಡೆದ ಯಶಸ್ವಿ ಉದಾಹರಣೆಗಳು ಸಾಕಷ್ಟು ಇವೆ. ವಯೋಸಂಬಂಧಿತ ಗರ್ಭಧರಿಸುವಿಕೆ, ಅಥವಾ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುವವರಾಗಿದ್ದರೆ ಮೊದಲೇ ಈ ಕುರಿತು ಯೋಚಿಸುವುದೊಳಿತು. ಇದೊಂದು ನಿಮ್ಮ ಆಯ್ಕೆಯಾಗಿರಲಿ. ಈ ಆಯ್ಕೆಯನ್ನು ನಾವು ಕೂಡ ಶಿಫಾರಸ್ಸು ಮಾಡುತ್ತೇವೆ ಎನ್ನುತ್ತಾರೆ.

ಮಣಿಪಾಲ ಅಂಕುರ್​ನ ಆಂಡ್ರಿಯೋಲಾಜಿ ಸಲಹೆಗಾರರಾದ ಡಾ. ಪ್ರವೀಣ್ ಜೋಶಿ, ಈ ರೀತಿ ಅಂಡಾಣುವಿನ ಜೀವಕೋಶಗಳನ್ನು ಶೀಥಲೀಕರಣಗೊಳಿಸುವುದಲ್ಲದೆ, ವೀರ್ಯಾಣುವನ್ನು ಕೂಡ ಶೀಥಲಿಕರಣಗೊಳಿಸಬಹುದು. ಸಂತಾನಹರಣ ಚಿಕಿತ್ಸೆಗೊಳಗಾಗುವ ಪುರುಷರು ಅಥವಾ ವೀರ್ಯಾಣುವಿನ ಪ್ರಮಾಣ ಕಡಿಮೆ ಇರುವರು ಈ ರೀತಿ ವೀರ್ಯ ಉಳಿಸಿಕೊಂಡು ಮುಂದೆ ಮಕ್ಕಳನ್ನು ಪಡೆಯುವ ಸಾಧ್ಯತೆ ಇದೆ. ವೀರ್ಯಾಣು ಹಾಗೂ ಅಂಡಾಣುಗಳೆರಡನ್ನೂ ಹೀಗೆ ಉಳಿಸಿಕೊಂಡು ಗರ್ಭಧರಿಸುವುದು ನಿಜಕ್ಕೂ ಪರಿಣಾಮಕಾರಿಯಾದ ತಂತ್ರಜ್ಞಾನವಾಗಿದೆ ಎನ್ನುತ್ತಾರೆ.

Write A Comment