ಮನೋರಂಜನೆ

ಮತ್ತೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಜೆನಿಲಿಯಾ

Pinterest LinkedIn Tumblr

jelinaಸದ್ಯ ತಾಯ್ತನದ ಖುಷಿಯಲ್ಲಿರುವ ಜೆನಿಲಿಯಾ ಈಗ ತಮ್ಮ ಅಭಿಮಾನಿಗಳಿ ಒಂದು ಬಿಗ್ ಸಪ್ರೈಸ್ ಒಂದನ್ನು ನೀಡಿದ್ದಾರೆ. ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ ಜೆನಿಲಿಯಾ ಇದೀಗ ಮತ್ತೆ ನಟನೆಗೆ ವಾಪಸ್ಸಾಗಿದ್ದಾರೆ.

2012ರಲ್ಲಿ ನ ರಿತೀಶ್ ದೇಶಮುಖ್ ಅವರನ್ನು ಕೈಹಿಡಿದಿದ್ದ ಜೆನಿಲಿಯಾ ಡಿಸೋಜಾ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಅಲ್ಲೊಮ್ಮೆ ಇಲ್ಲೊಮ್ಮೆ ಪಾರ್ಟಿ, ಇಲ್ಲಾ ಯಾವುದಾದರು ಸಮಾರಂಭಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದರು. ಆದ್ರೀಗ ಮತ್ತೆ ತಮ್ಮ ಹಳೆಯ ವೃತ್ತಿಯತ್ತ ವಾಪಸ್ಸಾಗಿದ್ದಾರೆ. ಇನ್ನು ಪತ್ನಿ ಸಿನಿಮಾರಂಗಕ್ಕೆ ವಾಪಸ್ಸಗುತ್ತಿರುವ ಬಗ್ಗೆ ರಿತೀಶ್ ದೇಶಮುಖ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಕಳೆದ ವರ್ಷವಷ್ಟೇ ಜೆನಿಲಿಯಾ ಹಾಗೂ  ರಿತೀಶ್ ದೇಶ್ ಮುಖ್ ದಂಪತಿಗೆ ಗಂಡು ಮಗುವಾಗಿತ್ತು. ಇದೀಗ ಕೊಂಚ ಬಿಡುವು ಮಾಡಿಕೊಂಡಿರುವ ಜೆನಿಲಿಯಾ ಮೂರು ವರ್ಷಗಳ ಬಳಿಕ  ಬಾಲಿವುಡ್ ನಲ್ಲಿ ಮತ್ತೆ ಕಮಾಲ್ ಮಾಡೋದಕ್ಕೆ ರೆಡಿಯಾಗಿದ್ದಾರೆ.

Write A Comment