ಮನೋರಂಜನೆ

ಕಂಗನಾ ಬ್ಯಾಲೆ

Pinterest LinkedIn Tumblr

kanganaಸಿನಿಮಾ ಸ್ಟಾರ್​ಗಳೇ ಅದೃಷ್ಟವಂತರು! ಸಿನಿಮಾ ಕಾರಣಕ್ಕೆ ಕಾಲಕಾಲಕ್ಕೆ ಹೊಸದೇನನ್ನಾದರೂ ಅವರು ಕಲಿಯುತ್ತಲೇ ಇರುತ್ತಾರೆ. ಗುಣಮಟ್ಟದ ಚಿತ್ರಗಳು, ನಟನೆ ಹಾಗೂ ಸಕ್ಸಸ್ ದೃಷ್ಟಿಯಿಂದ ಸದ್ಯ ಬಾಲಿವುಡ್​ನಲ್ಲಿ ಟಾಪ್ ನಗೆ ಬೀರುತ್ತಿರುವ ಕಂಗನಾ ರಣೌತ್ ಈಗ ಬ್ಯಾಲೆ ನೃತ್ಯ ಕಲಿಯೋಕೆ ಉತ್ಸುಕರಾಗಿದ್ದಾರೆ. ಅಷ್ಟು ಮಾತ್ರವಲ್ಲ, ಕತ್ತಿವರಸೆ ಮತ್ತು ಕುದುರೆ ಸವಾರಿ ಕಲಿಯಲಿಕ್ಕೂ ಅಣಿಯಾಗಿದ್ದಾರೆ. ಇದೆಲ್ಲಕ್ಕೆ ಕಾರಣ, ‘ರಂಗೂನ್’.

‘ಹೈದರ್’ ಖ್ಯಾತಿಯ ವಿಶಾಲ್ ಭಾರದ್ವಾಜ್ ನಿರ್ದೇಶನದ ಮುಂದಿನ ಚಿತ್ರ ‘ರಂಗೂನ್’ನಲ್ಲಿ ಕಂಗನಾ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವುದು ವಿಶೇಷ. ಸೈಫ್ ಅಲಿ ಖಾನ್ ಮತ್ತು ಶಾಹಿದ್ ಕಪೂರ್ ಜತೆ ತೆರೆ ಹಂಚಿಕೊಳ್ಳಲಿರುವ ಕಂಗನಾ, ಬ್ರಾಡ್​ವೇ

ಡಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಅವರ ಪಾತ್ರದ ನಾಮಧೇಯ, ಜೂಲಿಯಾ. ಒಂದರ್ಥದಲ್ಲಿ ಕ್ಯಾಬರೆ ನೆನಪಿಸುವ ಈ ನೃತ್ಯದ ಪಟ್ಟುಗಳನ್ನು ಕರಗತ ಮಾಡಿಕೊಳ್ಳಲಿಕ್ಕಾಗಿ ಕಂಗನಾ ನ್ಯೂಯಾರ್ಕ್​ಗೆ ಹೋಗಿ 3 ತಿಂಗಳ ವರೆಗೆ ತರಬೇತಿ ಪಡೆಯಲಿದ್ದಾರಂತೆ.

ಅದ್ಸರಿ, ಕತ್ತಿವರಸೆ ಮತ್ತು ಕುದುರೆ ಸವಾರಿಗಳ ಅಗತ್ಯವೇನಿದೆ? ಇದಕ್ಕೂ ಉತ್ತರ, ‘ರಂಗೂನ್’. ಚಿತ್ರದ ಕೆಲ ದೃಶ್ಯಗಳಲ್ಲಿ ಕತ್ತಿವರಸೆ, ಕುದುರೆ ಸವಾರಿಗಳಿವೆಯಂತೆ. ‘ಒಮ್ಮೆಗೆ ಒಂದೇ ಚಿತ್ರ’ ಎಂಬ ನಿಯಮ ಪಾಲಿಸುವ ಕಂಗನಾ ಈ ಮೂರು ಬಗೆಯ ತರಬೇತಿಗಳಿಗೆ ಒಡ್ಡಿಕೊಳ್ಳಲಿದ್ದಾರೆ. ಕೇರಳದ ಆಶ್ರಮವೊಂದರಲ್ಲಿ ಮಾರ್ಷಲ್ ಆರ್ಟ್ಸ್ ಕಲಿಕೆ ಹಾಗೂ ಜೈಪುರದಲ್ಲಿ ಕುದುರೆ ಸವಾರಿ ತರಬೇತಿ ನಡೆಯಲಿದೆಯಂತೆ!!

Write A Comment