ಮನೋರಂಜನೆ

ಆಟಗಾರ್ತಿ ಅನು!

Pinterest LinkedIn Tumblr

anu-fiಒಂದು ಕಾಲಕ್ಕೆ ಬೇಡಿಕೆಯ ನಟಿಯಾಗಿದ್ದ ಅನು ಪ್ರಭಾಕರ್, ಇತ್ತೀಚೆಗೆ ಯಾವ ಚಿತ್ರಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. 2003ರ ಆಸುಪಾಸಿನಲ್ಲಿ ವರ್ಷಕ್ಕೆ ನಾಲ್ಕಾರು ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚುತ್ತಿದ್ದ ಅವರು, ಒಂದು ದಶಕ ಕಳೆಯುತ್ತಿದ್ದಂತೆ ಸಣ್ಣಪುಟ್ಟ ಪಾತ್ರಕ್ಕೆ ಸೀಮಿತವಾದರು. ಪರಿಣಾಮ, ಎಲ್ಲೋ ದಾರಿಯಲ್ಲಿ ಸಿಕ್ಕ ಅಭಿಮಾನಿಗಳು ‘ಏನ್ ಮೇಡಮ್​ನೀವು ನಟಿಸೋದನ್ನೇ ನಿಲ್ಲಿಸಿಬಿಟ್ರಾ…?’ ಎಂದು ಕೇಳುತ್ತಿದ್ದರಂತೆ. ಇಷ್ಟು ದಿನ ಏನು ಹೇಳೋದು ಅಂತಾನೇ ಗೊತ್ತಾಗದೆ ಗೊಂದಲಕ್ಕೊಳಗಾಗುತ್ತಿದ್ದ ಅವರೀಗ ಖುಷಿಯಿಂದಲೇ ಉತ್ತರಿಸುತ್ತಿದ್ದಾರಂತೆ. ‘ದ್ವಾರಕೀಶ್ ನಿರ್ವಣದ ‘ಆಟಗಾರ’ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರಂತೆ ಅನು.

ಚಿರಂಜೀವಿ ಸರ್ಜಾ ನಾಯಕತ್ವದ ‘ಆಟಗಾರ’ ಚಿತ್ರಕ್ಕೆ ‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಆಕ್ಷನ್-ಕಟ್ ಹೇಳಿದ್ದಾರೆ. ‘ಆ ದಿನಗಳು’ ಚಿತ್ರ ನೋಡಿದಾಗಿನಿಂದಲೇ ಚೈತನ್ಯ ಜೊತೆ ಕೆಲಸ ಮಾಡಬೇಕು ಎಂಬ ಕನಸು ಹೊತ್ತುಕೊಂಡಿದ್ದರಂತೆ ಅನು. ಅದೀಗ ‘ದ್ವಾರಕೀಶ್ ಚಿತ್ರ’ ಬ್ಯಾನರ್ ಮೂಲಕ ನನಸಾಗುತ್ತಿರುವುದು ಅವರ ಪಾಲಿಗೆ ಮತ್ತಷ್ಟು ಖುಷಿ ತಂದಿದೆ. ‘ಆಟಗಾರ’ನ ಆಟವನ್ನು ಸೆರೆಹಿಡಿದಿರುವ ಛಾಯಾಗ್ರಾಹಕ ಸತ್ಯ ಹೆಗಡೆ, ಅನು ಕೋರಿಕೆಯಂತೆ ಅವರನ್ನು ಸುಂದರವಾಗಿ ಚಿತ್ರಿಸಿದ್ದಾರಂತೆ. ಇನ್ನು ಈ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ದ್ವಾರಕೀಶ್ ಜೊತೆ ಹೆಚ್ಚಿನ ದೃಶ್ಯಗಳಲ್ಲಿ ತೆರೆಹಂಚಿಕೊಳ್ಳಲು ಸಾಧ್ಯವಾಗಿಲ್ಲ ಅನ್ನೋದು ಬಿಟ್ಟರೆ, ಅನು ಪಾಲಿಗೆ ‘ಆಟಗಾರ’ ಒಂದು ಸುಂದರ ಅನುಭವ ನೀಡಿದೆಯಂತೆ. ಇದೇ ರೀತಿ ಉತ್ತಮ ಕಥೆ, ಪಾತ್ರದ ಜೊತೆಗೆ ಚೈತನ್ಯ ಅವರಂಥ ನಿರ್ದೇಶಕರು, ದ್ವಾರಕೀಶ್ ಅವರಂಥ ನಿರ್ವಪಕರು ಸಿಕ್ಕರೆ ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ಹಂಬಲವೂ ಅನು ಮನದಲ್ಲಿ ಚಿಗುರೊಡೆದಿದೆಯಂತೆ.

Write A Comment