ಬಾಲಿವುಡ್‍ನ ಅಂಗಳದಲ್ಲರೇ ಆಡಿ ನಲಿದ ಅಥಿಯಾಳಿಗೆ ಸಿನೆಮಾ ಜಗತ್ತು ಹೊಸದಲ್ಲ. ಈಕೆ ಖ್ಯಾತ ನಟ ಸುನಿಲ್ ಶೆಟ್ಟಿಯ ಪುತ್ರಿ.
ಬಾಲ್ಯದಿಂದಲೇ ಅಭಿನಯದ ಆಸಕ್ತಿ ಹೊಂದಿದ್ದ ಅಥಿಯಾಳನ್ನು ತಂದೆ ತಾಯಿ ಪ್ರೋತ್ಸಾಹಿಸಿದರು. ಭವಿಷ್ಯವನ್ನು ಇಲ್ಲೇ ಕಂಡು ಕೊಳ್ಳುವುದು ಎಂದು ಅಥಿಯಾ ನಿರ್ಧರಿಸಿಯಾಗಿದೆ. ನ್ಯೂಯಾರ್ಕಿನಲ್ಲಿ ಎರಡು ವರ್ಷದ ಆ್ಯಕ್ಟಿಂಗ್ ಕೋರ್ಸ್ ಮಾಡಿದ್ದಾಳೆ. ಹೀಗೆ ಎಲ್ಲ ತಯಾರಿ ಮಾಡಿಕೊಂಡೇ ಬಣ್ಣ ಹಚ್ಚಿರುವ ಅಥಿಯಾಳ ಮೊದಲ ಚಿತ್ರ ಹೀರೊ.
ಅವಳ ಎದುರು ನಾಯಕನಾಗಿ ನಟಿಸುತ್ತಿರುವವನು ಕೂಡ ಹೊಸಬನೇ. ಈತ ಇನ್ನೋರ್ವ ತಾರಾ ಪುತ್ರ ಸೂರಜ್ ಪಾಂಚೋಲಿ. ಅಂದ ಹಾಗೇ ಹೀರೊ 1983ರಲ್ಲಿ ಬಂದ ಸೂಪರ್ ಹಿಟ್ ಚಿತ್ರ ಹೀರೊದ ರೀಮೇಕ್. ಕತೆ ಮತ್ತು ಹೆಸರು ಎರಡೂ ಹಳೆಯದು. ಮೀನಾಕ್ಷಿ ಶೇಷಾದ್ರಿ ನಿರ್ವಹಿಸಿದ ಪಾತ್ರದಲ್ಲೀಗ ಅಥಿಯಾ ನಟಿಸುತ್ತಿದ್ದಾಳೆ.
ಸಹಜವಾಗಿಯೇ ಇದು ತುಸು ಕಷ್ಟದ ಕೆಲಸ. ಹೇಗೆ ನಟಿಸಿದರೂ ಪ್ರೇಕ್ಷಕರು ಮೀನಾಕ್ಷಿಯೊಂದಿಗೆ ತುಲನೆ ಮಾಡಿಯೇ ಮಾಡುತ್ತಾರೆ. ಹೀಗಾಗಿ ಮೀನಾಕ್ಷಿ ಶೇಷಾದ್ರಿಯನ್ನು ಮೀರಿಸುವ ಸವಾಲು ಅಥಿಯಾಳ ಮೇಲಿದೆ. ನಿಜವಾದ ಫಲಿತಾಂಶ ಸಿಗುವುದು ಸಪ್ಟೆಂಬರ್‍ನಲ್ಲಿ. ಆಲ್ ದಿ ಬೆಸ್ಟ್ ಅಥಿಯಾ.