ಕರ್ನಾಟಕ

ತಾಯಿ – ಮಕ್ಕಳಿಬ್ಬರನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳು

Pinterest LinkedIn Tumblr

blg-murder

ಬೆಳಗಾವಿ: ತಾಯಿ ಮತ್ತು ಮಕ್ಕಳಿಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಕುವೆಂಪು ನಗರದ ಬಡಾವಣೆಯೊಂದರಲ್ಲಿ ಶನಿವಾರ ರಾತ್ರಿ ನಡೆದಿದೆ.

ಹತ್ಯೆಗೀಡಾದವರು ರೀನಾ ಮಾಲಗತ್ತಿ(35) ಮಕ್ಕಳಾದ ಆದಿತ್ಯ(11) ಮತ್ತು ಸಾಹಿತ್ಯ(4) ಎಂದು ತಿಳಿದು ಬಂದಿದೆ. ಮೇಲ್ಮಹಡಿಯಲ್ಲಿರುವ ಬಾಗಿಲಿನ ಮೂಲಕ ಪ್ರವೇಶಿಸಿದ ದುಷ್ಕರ್ಮಿಗಳು ಬೆಡ್‌ ರೂಂನಲ್ಲಿ ಮಲಗಿದ್ದ ರೀನಾ ಮಾಲಗತ್ತಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಬಳಿಕ ಮಕ್ಕಳಿಬ್ಬರನ್ನು ಬಾತ್ ರೂಂನಲ್ಲಿ ಕತ್ತು ಹಿಸುಕಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.

ರೀನಾ ಪತಿ ಗೋವಾದ ಸಂಬಂಧಿಕರೊಬ್ಬರ ಮನೆಗೆ ತೆರಳಿದ್ದ ವೇಳೆ ಈ ಕೃತ್ಯ ನಡೆದಿದೆ. ಭಾನುವಾರ ಬೆಳಗ್ಗೆ ರೀನಾ ಪತಿ ಮನೆಗೆ ಕರೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಗೆ ಸೆಕ್ಯುರಿಟಿ ಗಾರ್ಡ್‌ ಒಬ್ಬ ಇದ್ದು ಆತನ ಎದುರೆ ಕೊಲೆ ನಡೆದಿದೆ ಎನ್ನಲಾಗಿದ್ದು ಪೊಲೀಸರು ಆತನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಎಸ್‌.ರವಿ , ಡಿಸಿಪಿ ಅನುಪಮ್‌ ಅಗರ್ವಾಲ್‌ ಅವರು ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment