ಮಂಗಳೂರು,ಆಗಸ್ಟ್.17 : ನಗರದ ಶಾಸಕರಾದ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ಸುಮಾರು 100 ಶಾಲಾ ಮುಖ್ಯೋಪಾಧ್ಯಯರೊಂದಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಮ್ಮಖದಲ್ಲಿ 2014-15 ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಪರಿಶೀಲಿಸಿದರು.
ಕಳೆದ ಸಾಲಿನ ಅಂಕಿ ಅಂಶಗಳ ಪ್ರಕಾರ ಸರಕಾರಿ ಶಾಲೆಗಳಿಗೆ 81 %, ಅನುದಾನಿತ ಶಾಲೆಗಳಿಗೆ 86 % ಹಾಗೂ ಅನುದಾನ ರಹಿತ ಶಾಲೆಗಳಿಗೆ 91 ಶೇಕಡಾ ಫಲಿತಾಂಶವು ಲಭಿಸಿತ್ತು. ಬಳಿಕ ಮಾತನಾಡಿದ ಶಾಸಕರು ದಕ್ಷಿಣ ಕನ್ನಡ ಹಾಗೂ ಉಡುಪಿ ಶಿಕ್ಷಣಕ್ಕೆ ಹೆಸರುವಾಸಿಯಾದ ಜಿಲ್ಲೆಗಳು. ರಾಜ್ಯದಲ್ಲಿ 29 ನೇ ಸ್ಥಾನದಿಂದ ಕಳೆದ ಬಾರಿ 8 ನೇ ಸ್ಥಾನಕ್ಕೆ ಬಂದು, ಜಿಲ್ಲೆಗೆ ವರ್ಚಸ್ಸು ತರಲು ಶ್ರಮ ಪಟ್ಟ ಶಿಕ್ಷಕರನ್ನು ಅಭಿನಂದಿಸಿದರು.
ಪಿ.ಯು.ಸಿ ಪರೀಕ್ಷೆಯಲ್ಲಿ ಒಳ್ಳಯ ಫಲಿತಾಂಶ ಜಿಲ್ಲೆಗೆ ಲಭಿಸಿದ್ದು, ಎಸ್.ಎಸ್.ಎಲ್.ಸಿಯಲ್ಲಿಯು ಮುಂದೆ ಬರಲು ಎಲ್ಲಾ ಪೂರ್ಣ ಸಿದ್ದತೆಯನ್ನು ಮಾಡಬೇಕಾಗಿದೆ. ಕಳೆದ ಸಾಲಿನಲ್ಲಿ ಶೇಕಡ 88 % ಮಕ್ಕಳು ಉತ್ತಿರ್ಣ ರಾಗಿದ್ದು, ಪ್ರಸ್ತುತ ಸಾಲಿನಲ್ಲಿ ಫಲಿತಾಂಶವನ್ನು ಕನಿಷ್ಠ 95%ಕ್ಕೆ ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು ಹಾಗೂ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಓತ್ತು ನೀಡಲು ಶಿಕ್ಷಕರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಉಪಸ್ಥಿತರಿದ್ದರು.