ಮನೋರಂಜನೆ

ಉಪ್ಪಿ2: ವಿಶ್ವದಲ್ಲಿಯೇ ಹೆಚ್ಚು ರೇಟ್ ಪಡೆದ ಚಿತ್ರ

Pinterest LinkedIn Tumblr

uppittuಬೆಂಗಳೂರು: ಇಂಟರ್ನೆಟ್ ಮೂವಿ ಡಾಟಾಬೇಸ್ ( ಐಎಂಡಿಬಿ)ನಿಂದ ಉಪೇಂದ್ರ ನಿರ್ದೇಶನದ ‘ಉಪ್ಪಿ2’ಗೆ ವಿಶ್ವದಲ್ಲಿಯೇ ಅತಿ ಹೆಚ್ಚಿನ ರೇಟ್ ಸಿಕ್ಕಿದ ಮೂವಿ ಎಂಬ ಗೌರವ ದಕ್ಕಿದೆ. ಈಗಾಗಲೇ ಈ ಚಿತ್ರಕ್ಕೆ ಅತ್ಯತ್ತಮ ಪ್ರತಿಕ್ರಿಯೆ ದೊರೆತಿದ್ದರಿಂದ ಅತೀವ ಸಂತಸಗೊಂಡಿರುವ ಉಪೇಂದ್ರ ಅವರ ಖುಷಿ ಇದರಿಂದ ಇಮ್ಮಡಿಗೊಂಡಿದೆ.

ವಿಶ್ವದಲ್ಲಿಯೇ ಹೆಚ್ಚು ರೇಟ್ ಪಡೆದ ಸಿನಿಮಾಗಳ ಪಟ್ಟಿಯನ್ನು ವೆಬ್‌ಸೈಟ್ ಪ್ರಕಟಿಸಿದ್ದು, 10ಕ್ಕೆ 9.7 ಅಂಕ ಪಡೆದ ಉಪ್ಪಿ2 ಮೊದಲ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಕನ್ನಡದ ‘ರಂಗಿತರಂಗ’ 10ಕ್ಕೆ 9.4 ಅಂಕಗಳನ್ನು ಪಡೆದು, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ವಿಶ್ವದೆಲ್ಲೆಡೆಯಿಂದ ಉಪ್ಪಿ2ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕ್ಯಾಲಿಫೋರ್ನಿಯಾ, ಅಮೆರಿಕದಲ್ಲಿ ಈ ಸಿನಿಮಾದ ಟೆಕೆಟ್ ಬಿಸಿ ಬಜ್ಜಿಯಂತೆ ಖಾಲಿಯಾದ್ದರಿಂದ, ಹೆಚ್ಚುವರಿ ರಾತ್ರಿ ಶೋಗಳನ್ನು ತೋರಿಸಲಾಯಿತು.

Write A Comment