ಅಂತರಾಷ್ಟ್ರೀಯ

ಫೇಸ್‌ಬುಕ್ ನೋಟ್‌ಗೆ ಹೊಸ ರೂಪ

Pinterest LinkedIn Tumblr

A smartphone user shows the Facebook application on his phone in Zenica, in this photo illustration

ನ್ಯೂಯಾರ್ಕ್: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಬಳಕೆದಾರರು ತಮ್ಮ ಬರಹಗಳನ್ನು ಹಂಚಿಕೊಳ್ಳಲು ರೂಪಿಸಿದ್ದ ವೇದಿಕೆ ‘ನೋಟ್’ ವಿಭಾಗವು ಸಂಪೂರ್ಣ ಬದಲಾಗಿದೆ.

ಸಾಂಪ್ರದಾಯಿಕ ಶೈಲಿಯನ್ನು ತೆಗೆದು ಬ್ಲಾಗಿಂಗ್ ಮಾದರಿಯಲ್ಲಿ ನೋಟ್ ವಿಭಾಗವನ್ನು ಬದಲಾಯಿಸಲಾಗಿದೆ. ಪ್ರತೀ ನೋಟ್‌ನ ಮೇಲಿನಿಂದ ಕೆಳಗಿನವರೆಗೆ ಚಿತ್ರ ಇರುತ್ತದೆ. ಪಕ್ಕದಲ್ಲಿರುವ ಸಿಂಗಲ್ ಕಾಲಂನಲ್ಲಿ ಬಳಕೆದಾರರು ಬರೆಯಲು ಅವಕಾಶ ಇರುತ್ತದೆ.

ಫೇಸ್‌ಬುಕ್ ನೋಟ್‌ನಲ್ಲಿ ಈ ಹಿಂದೆ ಏರಿಯಲ್ ಫಾಂಟ್‌ನಲ್ಲಿ ಮಾತ್ರ ಬರೆಯಲು ಅವಕಾಶವಿತ್ತು. ಈಗ ಜಾರ್ಜಿಯಾ ಫಾಂಟ್‌ಗೆ ಬದಲಾಗಿದೆ. ಈ ಲಿಪಿಯು ಓದನ್ನು ಸರಳೀಕರಿಸುತ್ತದೆ ಎಂಬ ಕಾರಣಕ್ಕೆ ಫಾಂಟ್ ಬದಲುಮಾಡಿರುವುದಾಗಿ ಫೇಸ್‌ಬುಕ್ ಹೇಳಿದೆ.

Write A Comment