ಅಂತರಾಷ್ಟ್ರೀಯ

ಅಬ್ಬಬ್ಬಾ ! ಇಲ್ಲಿ ಹಾವಿನ ರಕ್ತವನ್ನೂ ಕುಡಿತಾರೆ!!

Pinterest LinkedIn Tumblr

snakeವಾಷಿಂಗ್ಟನ್: ನಮ್ಮಲ್ಲೆಲ್ಲಾ ನಾಗರಪಂಚಮಿ ಮಾಡಿ ಹಾವಿಗೆ, ಹಾವಿನ ಹುತ್ತಕ್ಕೆ ಪೂಜಿಸಿದ ಹಬ್ಬದ ವಾತಾವರಣ ಹಸಿರಾಗಿರುವಾಗಲೇ, ಹಾವಿಗೆ ಸಂಬಂಧಿಸಿದ ಬೆಚ್ಚಿ ಬೀಳುವಂತಹ ಸುದ್ದಿಯೊಂದು ವರದಿಯಾಗಿದೆ. ಆ ಮಹಿಳೆಯರು ಎಂಥ ಧೀರೆಯರೆಂದರೆ ಹಾವಿನ ರಕ್ತವನ್ನು ಗಟಗಟನೆ ಕುಡಿಯಬಲ್ಲರು.

ಹೌದು! ಆ ಮಹಿಳೆಯರು ಕಾಳಿಂಗ ಸರ್ಪದ ರಕ್ತ ಕುಡಿಯುತ್ತಾರೆ.ಮಾತ್ರವಲ್ಲ, ಕೇವಲ 40 ನಿಮಿಷಗಳಲ್ಲಿ 5 ಮೈಲಿ ದೂರ ಓಡ್ತಾರೆ. ಇನ್ನೂ ಹಲವಾರು ಕಠಿಣ ದೈಹಿಕ ವ್ಯಾಯಾಮಗಳನ್ನು ಮಾಡ್ತಾರೆ. ಹೌದು ಇದು ನಿಜ. ಅಮೆರಿಕ ಸೇನೆಯಲ್ಲಿ ಸ್ತ್ರೀಯರೂ ಕಠಿಣ ತರಬೇತಿ ಪಡೆಯುವುದು ಅನಿವಾರ್ಯ ಕೂಡ.

ಅಮೆರಿಕ ಸೇನೆ ನಾಯಕತ್ವ ತರಬೇತಿ ಕೋರ್ಸ್ ಅಂದರೆ ರೇಂಜರ್ ಕೋರ್ಸ್ನ ಅಂತಿಮ ಹಂತದಲ್ಲಿ ಹಲವು ಕಠಿಣ ತರಬೇತಿಗಳನ್ನು ನೀಡಲಾಗಿದೆ. ಜಾರ್ಜಿಯಾದ ಫೋರ್ಟ್​ಬೆನ್ನಿಂಗ್​ನಲ್ಲಿ ಆರಂಭಿಸಿದ್ದ ಕೋರ್ಸ್​ನಲ್ಲಿ 19 ಮಹಿಳೆಯರು ಭಾಗವಹಿಸಿದ್ದರು.  ಕೋರ್ಸ್​ನ ಕೊನೆಯ 62 ದಿನಗಳ ನಾಯಕತ್ವ ಶಿಬಿರದಲ್ಲಿ ಪರ್ವತ, ಮರುಭೂಮಿ ಹಾಗೂ ದುರ್ಗಮ ಪ್ರದೇಶಗಳಲ್ಲಿ ತರಬೇತಿ ನೀಡಲಾಗಿತ್ತು ಎನ್ನಲಾಗಿದೆ.

ಆಯ್ದ ಅಭ್ಯರ್ಥಿಗಳನ್ನು ಥಾಯ್ಲೆಂಡ್ ಸೇನೆಯ ಜತೆಗಿನ ಜಂಟಿ ಸಮರಾಭ್ಯಾಸದಲ್ಲೂ ತೊಡಗಿಸಿಕೊಳ್ಳಲಾಗಿತ್ತು. ಥಾಯ್ಲೆಂಡ್​ನ ಚಾನ್ ಬುರಿ ಪ್ರಾಂತದಲ್ಲಿ ನಡೆದ ಜಂಟಿ ಸಮರಾಭ್ಯಾಸದ ಸಂದರ್ಭ ಜಂಗಲ್ ಸರ್ವೆವಲ್ ಎಕ್ಸರ್​ಸೈಸ್ ನಡೆಸಲಾಗಿತ್ತು. ಈ ವೇಳೆ ಮಹಿಳಾ ಅಭ್ಯರ್ಥಿಗಳೂ ಒಳಗೊಂಡಂತೆ ಎಲ್ಲರಿಗೂ ಕಾಳಿಂಗ ಸರ್ಪದ ರಕ್ತ ಕುಡಿಯುವುದು ಕಡ್ಡಾಯವಾಗಿತ್ತು.

Write A Comment