ನವದೆಹಲಿ: ವಿವಾದಿತ ದೇವ ಮಹಿಳೆ ರಾಧೆ ಮಾ ಪ್ರಕರಣ ಇನ್ನೊಂದು ತಿರುವು ಪಡೆಯುವ ಸಾಧ್ಯತೆ ದಟ್ಟವಾಗಿದೆ. ನನ್ನನ್ನು ಅಪರಿಚಿತನೊಂದಿಗೆ ಸೆಕ್ಸ್ ಮಾಡುವಂತೆ ರಾಧೆ ಮಾ ಒತ್ತಾಯಿಸಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ಡೋಲಿ ಬಿಂದ್ರಾ ಇದೀಗ ದೇವ ಮಹಿಳೆಯ ವಿರುದ್ಧ ಆರೋಪ ಹೊರಿಸಿದ್ದಾರೆ.
ನಾನೊಮ್ಮೆ ರಾಧೆ ಮಾ ಅವರ ಅನುಯಾಯಿಯಾದ್ದೆ. ಆಗ ರಾಧೆ ಮಾ ನನ್ನಲ್ಲಿ ಅಪರಿಚಿತನೊಂದಿಗೆ ಸೆಕ್ಸ್ ಮಾಡು ಎಂದು ಹೇಳಿದ್ದರು. ಈ ಬಗ್ಗೆ ನಾನು 20 ಮಂದಿಯ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ ಎಂದು ಡೋಲಿ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಅದೇ ವೇಳೆ ರಾಧೆ ಮಾ ಅವರ ಸತ್ಸಂಗದಲ್ಲಿ ಇದೆಲ್ಲಾ ಮಾಮೂಲಿ ಎಂದು ಡೋಲಿ ಹೇಳಿದ್ದಾರೆ. ಒಂದು ವೇಳೆ ಡೋಲಿ ಹೇಳಿದ್ದೂ ನಿಜವೇ ಆಗಿದ್ದರೆ ರಾಧೆ ಮಾಳ ನಿಗೂಢ ಲೋಕದ ಬಗ್ಗೆ ಇನ್ನಷ್ಟು ಮಾಹಿತಿಗಳು ಬಹಿರಂಗವಾಗಲಿವೆ.