ಮನೋರಂಜನೆ

ನನ್ನ ಮೇಲೆ 3 ದಿನ ನಿರಂತರ ಅತ್ಯಾಚಾರ: ಪೂಜಾ ಮಿಶ್ರಾ ಆರೋಪ

Pinterest LinkedIn Tumblr

pooja-mishra

ನವದೆಹಲಿ: ಬಿಗ್‍ಬಾಸ್ ಮನೆಯಿಂದ ಮತ್ತೊಂದು ಮುಜುಗರದ ಸುದ್ದಿ ಹೊರಬಂದಿದೆ. ನೋಯ್ಡಾದ ಅತಿಥಿಗೃಹವೊಂದರಲ್ಲಿ ಅಪರಿಚಿತನೊಬ್ಬ ಆ.17ರಂದು ತನ್ನ ಮೇಲೆ ನಿರಂತರ 3 ದಿನ ಅತ್ಯಾಚಾರ ಎಸಗಿದ್ದಾನೆ ಎಂದು ಬಿಗ್‍ಬಾಸ್ 5ನೇ ಆವೃತ್ತಿಯ ಸ್ಪರ್ಧಿ, ರೂಪದರ್ಶಿ ಪೂಜಾ ಮಿಶ್ರಾ ಆರೋಪಿಸಿದ್ದಾರೆ.

ಈ ಬಗ್ಗೆ ದೂರು ನೀಡಿರುವ ಪೂಜಾ, ನನಗೆ ಮಾದಕ ದ್ರವ್ಯ ನೀಡಿ, ಎತ್ತಿಕೊಂಡೊಯ್ದ ಅಪರಿಚಿತನೊಬ್ಬ ಸತತ ಮೂರು ದಿನ ಹೇಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಏ.15ರಂದು ಉದಯಪುರದಲ್ಲಿ ತನ್ನ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿತ್ತೆಂದು ದೂರು ನೀಡಿದ್ದರು. ಶೂಟಿಂಗ್‍ಗೆ ಹೋಗಿದ್ದ ಪೂಜಾಳ ಮೇಲೆ ಹೋಟೆಲ್ ನಲ್ಲಿ ದೈಹಿಕ ಹಿಂಸೆ ನಡೆದಿತ್ತೆಂದು ದೂರು ದಾಖಲಾಗಿತ್ತು.

Write A Comment