ಮುಸ್ಲೀಂ ರಲ್ಲಿ ಹಜ್ ಯಾತ್ರೆ ಮಾಡುವುದು ಒಂದು ಸಂಪ್ರದಾಯ. ಭಾರತದಿಂದಲೂ ಸಾಕಷ್ಟು ಮಂದಿ ಮುಸ್ಲಿಮರು ತೆರಳುತ್ತಾರೆ. ಘನ ಸರ್ಕಾರವೂ ಸಹ ಇದಕ್ಕೆ ಸಹಾಯಧನ ನೀಡುತ್ತದೆ. ಆದರೆ ಈ ಬಾರಿ ಈ ಯಾತ್ರಾರ್ಥಿಗಳಿಗೊಂದು ಸುದ್ದಿ ಇದೆ ಏನು ಅಂತೀರಾ..? ಹಾಗಿದ್ದರೆ ಓದಿ.
ಹೌದು. ಹಜ್ ಯಾತ್ರೆಯಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರ ಹಜ್ ಯಾತ್ರಾರ್ಥಿಗಳು ವಯಾಗ್ರಾ, ಸೆಕ್ಸುವಲ್ ಕ್ರೀಮ್ಸ್, ತೈಲ ಹಾಗೂ ಅಶ್ಲೀಲ ಫೋಟೋಗ್ರಾಫ್ಸ್ ನಂತಹ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ಹಜ್ ನಡೆಯುತ್ತದೆ. ಮೆಕ್ಕಾದ ಮೀನಾದಲ್ಲಿನ ವಾರ್ಷಿಕ ಹಜ್ ಯಾತ್ರೆ ಸಲುವಾಗಿ ಸುಮಾರು 150 ರಾಷ್ಟ್ರಗಳಿಂದ ಕೋಟ್ಯಂತರ ಯಾತ್ರಾರ್ಥಿಗಳು ಇಲ್ಲಿಗೆ ತೆರಳುತ್ತಾರೆ. ಈ ಸಮಯದಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ತಡೆಯಲು ಈ ಬಾರಿ ವಯಾಗ್ರಾ ಮಾತ್ರೆ, ಲೈಂಗಿಕ ಸಂಬಂಧಿ ತೈಲ ಮತ್ತು ಕ್ರೀಮ್, ಖಾಶ್ ಖಾಶ್, ಸಿಂಥೆಟಿಕ್ ಕರ್ಪೂರ, ಸಣ್ಣ ಕಲ್ಲು, ಗುಟ್ಕಾ, ಖೈನಿ, ಗುಲ್ ಸೇರಿದಂತೆ ಹಲವು ವಸ್ತುಗಳನ್ನು ಕೊಂಡೊಯ್ಯಲು ನಿಷೇಧ ಹೇರಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರ ಈ ಆದೇಶ ನೀಡಿದ್ದು ಹಜ್ ಕಮಿಟಿ ಆಫ್ ಇಂಡಿಯಾ ಕೂಡಾ ಈ ಸಲಹೆಯನ್ನು ಜಾರಿಗೊಳಿಸಿದ್ದು, ಹಜ್ ಯಾತ್ರಾರ್ಥಿಗಳು ಇಂತಹ ನಿಷೇಧಿತ ವಸ್ತುಗಳನ್ನು ಕೊಂಡೊಯ್ದಲ್ಲಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗುವುದಾಗಿ ಎಚ್ಚರಿಸಿದೆ.
ಅಷ್ಟೇ ಅಲ್ಲ, ಕಸ್ಟಮ್ಸ್ ಅಧಿಕಾರಿಗಳು ಜೆಡ್ಡಾ ಅಥವಾ ಭಾರತದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಿದ್ದು ಒಂದೊಮ್ಮೆ ಹಜ್ ಯಾತ್ರಾರ್ಥಿಗಳ ಬಳಿ ಇಂತಹ ವಸ್ತುಗಳು ಕಂಡುಬಂದಲ್ಲಿ ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ.