ನವದೆಹಲಿ: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಪ್ರಕರಣ ಸಂಬಂಧ ಕಾಶ್ಮೀರ ಪ್ರತ್ಯೇಕತಾವಾದಿ ಶಬೀರ್ ಷಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ದೆಹಲಿ ಪೊಲೀಸರು ತನ್ನನ್ನು ಗೃಹ ಬಂಧನದಲ್ಲಿಟ್ಟಿದ್ದನ್ನು ವಿರೋಧಿಸಿರುವ ಶಬೀರ್ ಶಾ ದೆಹಲಿಯನ್ನು ತೊರೆಯಲು ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಜಾರಿ ನಿರ್ದೇಶನಾಲಯ ಶಬೀರ್ ಷಾಗೆ ಸಮನ್ಸ್ ನೀಡಿದೆ.
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಜ್ ಅಜೀಜ್ ಅವರನ್ನು ಭೇಟಿ ಮಾಡಲು ಶಬೀರ್ ಷಾ ದೆಹಲಿಗೆ ಆಗಮಿಸಿದ್ದ ವೇಳೆ ಇಡಿ ಸಮನ್ಸ್ ನೀಡಿ ಮಂಗಳವಾರದ ಒಳಗೆ ಜಾರಿ ನಿರ್ದೇಶನಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಿದೆ.
ಉಗ್ರರಿಗೆ ಆರ್ಥಿಕ ಸಹಾಯ ಮಾಡಿದ್ದ ಸುಮಾರು 2005 ಕೇಸುಗಳನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ದೆಹಲಿಯ ವಿಶೇಷ ಪೊಲೀಸ್ ತಂಡ ಉಗ್ರರಿಗೆ 63 ಲಕ್ಷ ರೂ. ಹಣ ನೀಡಿದ ಆರೋಪದ ಮೇಲೆ ಅಸ್ಲಾಂ ವನಿ ಎಂಬುವನನ್ನು ಬಂಧಿಸಿ ತೀವ್ರ ವಿಟಾರಣೆ ನಡೆಸುತ್ತಿದೆ.