_ Sathish Kapikad
ಮಂಗಳೂರು : ಹಲವಾರು ಪ್ರತಿಷ್ಠಿತ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಮತ್ತು ISO 9001:2008 ಪ್ರಮಾಣಿತ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್‍ಸ್ ಡೆವಲಪರ್‍ಸ್ (ಪ್ರೈ) ಲಿಮಿಟೆಡ್ ಸಂಸ್ಥೆಯು ಯಶಸ್ವೀ 30ನೇ ವರ್ಷಕ್ಕೆ ಮುನ್ನುಗ್ಗುತ್ತಿರುವ ಈ ಶುಭ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಯೋಜನೆಯನ್ನು ಆರಂಭಿಸುತ್ತಿದೆ.
ಈಗಾಗಲೇ ಹಲವಾರು ಸುಂದರ ಕಟ್ಟಡಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಸಮಾಜಕ್ಕೆ ಅರ್ಪಿಸಿರುವ ಇನ್‌ಲ್ಯಾಂಡ್ ಸಂಸ್ಥೆಯ ಮುಂದಿನ ಕೊಡುಗೆ ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್.
ಕೂಳೂರು ಕಾವೂರು ರಸ್ತೆಯ ಮಧ್ಯಭಾಗದಲ್ಲಿ ಮುಖ್ಯ ರಸ್ತೆಗೆ ತಾಗಿಕೊಂಡೇ ನಿರ್ಮಾಣಗೊಳ್ಳಲಿರುವ ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್ ಅವಳಿ ವಸತಿ ಸಮುಚ್ಛಯದ ಶಿಲಾನ್ಯಾಸ ಕಾರ್ಯಕ್ರಮ ತಾರೀಕು 27.08.2015ನೇ ಗುರುವಾರ ಬೆಳಿಗ್ಗೆ 9 ಗಂಟೆಗೆ ನೆರವೇರಲಿದೆ.
ಎಲ್ಲೆಲ್ಲೂ ಕಾಂಕ್ರೀಟು ಕಟ್ಟಡಗಳೇ ತಲೆ ಎತ್ತಿರುವ ಮಂಗಳೂರು ನಗರ ಪ್ರದೇಶಕ್ಕೆ ಸಮೀಪದಲ್ಲಿಯೇ ಒಂದು ಸುಂದರ ತಾಣ. ಸುತ್ತಲೂ ಹಚ್ಚಹಸುರಿನ ಗಿಡಮರ ಪೊದೆಗಳ ಮಧ್ಯದಿಂದ ಚಿಲಿಪಿಲಿಗುಟ್ಟುವ ಪಕ್ಷಿಗಳಿಂದ ಕೂಡಿದ ವಾತಾವರಣ, ಸೂರ್ಯೋದಯ, ಸೂರ್ಯಾಸ್ತದ ಮನಸೂರೆಗೊಳ್ಳುವ ಬಂಗಾರ ಬಣ್ಣದ ಸಿಂಚನ. ಅತ್ಯಾಕರ್ಷಕ, ಹೃದಯಕ್ಕೆ ಮುದ ನೀಡುವ ಬೃಹದಾಕಾರದಲ್ಲಿ ಭೋರ್ಗರೆಯುವ ಸಮುದ್ರದ ತೆರೆಗಳ ನರ್ತನದ ಕಣ್ಮನ ತಣಿಸುವ ರಮಣೀಯ ದೃಶ್ಯಗಳಿಂದ ಕೂಡಿದ ಸುಂದರ ಪರಿಸರದಲ್ಲಿ ಗ್ರಾಹಕರು ನೀರೆರೆದು ಪೋಷಿಸಿಕೊಂಡು ಬೆಳೆಸಿರುವ ಸಂಸ್ಥೆ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್‍ಸ್ ಡೆವಲಪರ್‍ಸ್ (ಪ್ರೈ) ಲಿಮಿಟೆಡ್‌ನಿಂದ ನಿಮಗಾಗಿ ಇನ್ನೊಂದು ಅತ್ಯಾಕರ್ಷಕ TWIN ಕಟ್ಟಡಗಳ ಶಿಲಾನ್ಯಾಸದ ಕೊಡುಗೆಯೇ – ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್.
ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸಿರಾಜ್ ಅಹಮ್ಮದ್‌ರವರ ದೂರದೃಷ್ಟಿಯಿಂದ 1986 ರಲ್ಲಿ ಹುಟ್ಟಿದ ಇನ್‌ಲ್ಯಾಂಡ್ ರಿಯಲ್ ಎಸ್ಟೇಟ್ ಎಂಬ ಪುಟ್ಟ ಸಂಸ್ಥೆ ಇಂದು ಅವರ ಸಮರ್ಥ ಆಡಳಿತದೊಂದಿಗೆ ಇನ್‌ಲ್ಯಾಂಡ್ ಗ್ರೂಪ್ ಆಗಿ ಬೆಳೆದು ನಿಂತಿದೆ. ಇನ್‌ಲ್ಯಾಂಡ್ ಬಿಲ್ಡರ್‍ಸ್‌ನಿಂದ ಆರಂಭಗೊಂಡು, ಈಗಾಗಲೇ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್‍ಸ್, ಇನ್‌ಲ್ಯಾಂಡ್ ರಿಯಲ್ ಎಸ್ಟೇಟ್ಸ್, ಇನ್‌ಲ್ಯಾಂಡ್ ಇಂಡೋರ್‍ಸ್, ಇನ್‌ಲ್ಯಾಂಡ್ ಸರ್ವೀಸ್ ಎಪಾರ್ಟ್‌ಮೆಂಟ್ ಎಂಬ ಕಂಪೆನಿಗಳನ್ನು ಹುಟ್ಟು ಹಾಕಿರುವ ಶ್ರೀಯುತ ಸಿರಾಜ್‌ರವರು ಇತ್ತೀಚೆಗೆ ದುಬ್ಯಾಲ್ಲಿ ಕೂಡ ತಮ್ಮ ಸಂಸ್ಥೆಯ ಕಛೇರಿಯನ್ನು ಆರಂಭಿಸಿರುತ್ತಾರೆ.
ಮುಂದಿನ ಕೆಲವೇ ದಿನಗಳಲ್ಲಿ ಪುತ್ತೂರಿನಲ್ಲಿ ಇನ್‌ಲ್ಯಾಂಡ್ ಮಯೂರ ಶಿಲಾನ್ಯಾಸಗೊಳ್ಳಲಿದೆ ಹಾಗೂ ಬೆಂಗಳೂರಿನ ಇನ್‌ಲ್ಯಾಂಡ್ ಇಮಾದ್ ಉದ್ಘಾಟನೆಗೆ ಸಿದ್ಧವಾಗಿದೆ. ಜೊತೆಯಲ್ಲಿಯೇ ಬೆಂಗಳೂರಿನಲ್ಲಿ ಇನ್‌ಲ್ಯಾಂಡ್ ಎಡಿಲಾನ್, ಮಂಗಳೂರಿನಲ್ಲಿ ಇನ್‌ಲ್ಯಾಂಡ್ ಎವಿನ್ಸ್, ಇನ್‌ಲ್ಯಾಂಡ್ ಎಸ್ಟೋರಿಯಾ, ಇನ್‌ಲ್ಯಾಂಡ್ ಸಿಯಾನ್, ಇನ್‌ಲ್ಯಾಂಡ್ ಇಂಪಾಲ ವಸತಿ ಸಮುಚ್ಛಯಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್ ವಿಶೇಷತೆ :
ನೆಲಅಂತಸ್ತು ಸೇರಿ ಒಟ್ಟು 12 ಅಂತಸ್ತುಗಳನ್ನು ಹೊಂದಿರುವ ಸನ್‌ಲೈಟ್ ಬಹುಮಹಡಿ ಕಟ್ಟಡ ಹಾಗೂ 5 ಅಂತಸ್ತುಗಳ ಮೂನ್‌ಲೈಟ್ TWIN ಕಟ್ಟಡಗಳಲ್ಲಿ ಒಟ್ಟು 75 ಫ್ಲ್ಯಾಟುಗಳಿರುತ್ತವೆ. 3 BHK – 1415 Sq.Ft., 2 BHK – 1025 Sq.Ft., 1055 Sq.Ft., 1095 Sq.Ft., ವಿಸ್ತೀರ್ಣವನ್ನು ಹೊಂದಿರುತ್ತದೆ. ಅನೇಕ ವಿಶಿಷ್ಟವಾದ ಸವಲತ್ತುಗಳನ್ನು ಹೊಂದಲಿರುವ ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್ ಅತ್ಯುತ್ತಮ ಗುಣಮಟ್ಟದೊಂದಿಗೆ ನಿರ್ಮಿಸಲ್ಪಡುತ್ತಿದೆ.
ವಿಶೇಷ ಸವಲತ್ತುಗಳು:
1, 3 ಲೆವಲ್ ಕಾರ್ ಪಾರ್ಕಿಂಗ್ 2. ವಿಶಾಲವಾದ ಲಾಬಿ 3. ಸುಸಜ್ಜಿತ ಜಿಮ್ನಾಶಿಯಂ 4. ಮಕ್ಕಳ ಆಟದ ತಾಣ 5. Landscape ಗಾರ್ಡನ್ 6. ಫಯರ್ ಫೈಟಿಂಗ್ ಸಿಸ್ಟಮ್ಸ್ 7. ಇಂಟರ್‌ಕಾಂ ಸೌಲಭ್ಯ 8. ಮೊಡ್ಯುಲರ್ ಎಲೆಕ್ಟ್ರಿಕಲ್ ಸ್ವಿಚ್‌ಗಳು 9. ಎರಡು ಲಿಫ್ಟ್‌ಗಳು, ಇತ್ಯಾದಿ.
ಇನ್‌ಲ್ಯಾಂಡ್ ಎಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಹೊಂದಬೇಕೆಂದು ಅನೇಕ ವರ್ಷಗಳಿಂದ ಹಂಬಲಿಸುತ್ತಿರುವ ನಮ್ಮ ಪ್ರೀತಿಯ ಗ್ರಾಹಕರಿಗಾಗಿ ಕೈಗೆಟಕುವ ರೀತಿಯಲ್ಲಿ ದರ ನಿಗದಿಪಡಿಸಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಶ್ರೀಯುತ ಸಿರಾಜ್ ಅಹಮ್ಮದ್‌ರವರ ಕೋರಿಕೆಯಾಗಿದೆ.
ತಮ್ಮ ಸಂಸ್ಥೆಯೊಂದಿಗೆ ವಿಶ್ವಾಸನೀಯ ಬಾಂಧವ್ಯ ಬೆಳೆಸಿಕೊಂಡಿರುವ ಎಲ್ಲಾ ಗ್ರಾಹಕ ಮಿತ್ರರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿರುವ ಶ್ರೀಯುತ ಸಿರಾಜ್ ಅಹಮ್ಮದ್‌ರವರು ಭವಿಷ್ಯದಲ್ಲೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.
ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.inlandbuilders.net ಅನ್ನು ಸಂಪರ್ಕಿಸ ಬಹುದಾಗಿದೆ.