ಹಿರೇಬಾಗೇವಾಡಿ: ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ 213 ಕಿ.ಲೋ ಬೆಳ್ಳಿ ಹಾಗೂ 11.91 ಲಕ್ಷ ರೂ. ನಗದನ್ನು ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ದಾಸಗಾವ್‌ನಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಮಹೀಂದ್ರಾ ಜೀಪ್‌ಅನ್ನು ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ರಾತ್ರಿ ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.
ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದಾಸಗಾವ್‌ನ ಸತೀಶ್ ಭಗವಾನ್ ಸೂರ್ಯ ವಂಶಿ (30), ದೀಪಕ್ ಆನಂದ್ ಬಂಡಗಾರ್ (31), ಕೊಲ್ಲಾಪುರದ ಖಂಡೇರಾವ್ ಪಾಂಡುರಂಗ್ ವಾಗಮೋರೆ (28) ಬಂಧಿತರು. ಅಕ್ರಮವಾಗಿ ಸಾಗಿಸುತ್ತಿದ್ದ 213 ಕೆ.ಜಿ ಬೆಳ್ಳಿಯ ಅಂದಾಜು ಮೊತ್ತ 40 ಲಕ್ಷ 67 ಸಾವಿರ ರೂಪಾಯಿ.