ಹೊಸದಿಲ್ಲಿ: ಎನ್‍ಡಿಎ ಸರಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ 6 ನಗರಗಳು ಆಯ್ಕೆ ಆಗಿವೆ.
ಯೋಜನೆಗೆ ಆಯ್ಕೆ ಆಗಿರುವ 24 ರಾಜಧಾನಿ ಸೇರಿ 98 ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಸರಕಾರ ಗುರುವಾರ ಬಿಡುಗಡೆ ಮಾಡಿದೆ.
13 ನಗರಳ ಆಯ್ಕೆ ಮೂಲಕ ಉತ್ತರ ಪ್ರದೇಶ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ತಮಿಳುನಾಡಿನ 12, ಮಹರಾಷ್ಟ್ರದ 10, ಮಧ್ಯಪ್ರದೇಶದ 7 ಹಾಗೂ ಬಿಹಾರ ಹಾಗೂ ಆಂಧ್ರದ ತಲಾ 3 ನಗರಗಳು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿ ಹೊಂದಲಿವೆ.
‘ಮೊದಲ ವರ್ಷದಲ್ಲಿ 24 ನಗರಗಳನ್ನು ಸರಕಾರ ಸ್ಮಾರ್ಟ್ ಸಿಟಿ ಆಗಿ ಅಭಿವೃದ್ಧಿಪಡಿಸಲಿದೆ,’ ಎಂದು ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
‘ನಗರ ಜೀವನದ ಗುಣಮಟ್ಟ ಸುಧಾರಿಸುವದು ಸ್ಮಾರ್ಟ್ ಸಿಟಿ ಯೋಜನೆಯ ಮೂಲ ಉದ್ದೇಶ. ವಾಸ್ತವಕ್ಕೆ ಹತ್ತಿರವಾಗಿ ಕಾರ್ಯರೂಪಕ್ಕೆ ತರಬಹುದಾದಂಥ ಯೋಜನೆಯನ್ನು ರೂಪಿಸಲಾಗಿದೆ,’ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸ್ಮಾರ್ಟ್ ಸಿಟಿ ಆಗಲಿರುವ ರಾಜ್ಯದ ನಗರಗಳು:
1. ಹುಬ್ಬಳ್ಳಿ-ಧಾರವಾಡ
2. ಶಿವಮೊಗ್ಗ
3. ಬೆಳಗಾವಿ
4. ಮಂಗಳೂರು
5. ತುಮಕೂರು
6. ದಾವಣಗೆರೆ