ರಾಷ್ಟ್ರೀಯ

ಸಮಾನ ಶ್ರೇಣಿಗೆ ಸಮಾನ ಪಿಂಚಣಿ: ಪರಿಕ್ಕರ್್ ಜೊತೆ ಮಾತುಕತೆ ನಡೆಸಲಿರುವ ನಿವೃತ್ತ ಸೈನಿಕರು

Pinterest LinkedIn Tumblr

OROPನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್(ಒಆರ್ ಒಪಿ)ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗೆ ನಿರಾಕರಿಸಿದ್ದ ಪ್ರತಿಭಟನಾ ನಿರತ ನಿವೃತ್ತ ಸೈನಿಕರು ಈಗ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಲು ನಿರ್ಧರ್ಸಿದ್ದಾರೆ.

ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ನೇತೃತ್ವ ವಹಿಸಿರುವ ನಿವೃತ್ತ ಸೈನಿಕರು ಇಂದು ರಾತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆಯೂ ಹಲವು ಬಾರಿ ನಿವೃತ್ತ ಯೋಧರನ್ನು ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿತ್ತು.  ಆದರೆ ಪ್ರತಿಭಟನಾ ನಿರತರು ಮಾತ್ರ ತಿರಸ್ಕರಿಸಿದ್ದರು.

ಆಮರಣಾಂತ ಉಪವಾಸ ನಿಲ್ಲಿಸುವಂತೆ ಪ್ರಧಾನಿ ಕಾರ್ಯಾಲಯವೂ ಮನವಿ ಮಾಡಿತ್ತು. ಹಲವು ದಿನಗಳಿಂದ ನಿವೃತ್ತ ಯೋಧರು ಒ.ಆರ್.ಒ.ಪಿ ಗೆ ಆಗ್ರಹಿಸಿ ಆಮರಣಾಂತ ಉಪವಾಸ ಕೈಗೊಂಡಿದ್ದರು. ದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ರಕ್ಷಣಾ ಸಚಿವರ ನಿವಾಸದಲ್ಲಿ ನಿವೃತ್ತ ಸೈನಿಕರ ಪ್ರತಿನಿಧಿ ಹಾಗೂ ರಕ್ಷಣಾ ಸಚಿವರು ಇಂದು ರಾತ್ರಿ ನಡೆಸಲಿರುವ ಮಾತುಕತೆ ಮಹತ್ವ ಪಡೆದುಕೊಂಡಿದೆ.

Write A Comment