ಗಲ್ಫ್

ಬಹ್ರೈನ್ ನಲ್ಲಿ ಸ್ವಾತ೦ತ್ರ್ಯೋತ್ಸವ

Pinterest LinkedIn Tumblr

Behrain Kannada sangha _Aug 31_2015-006

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕನ್ನಡ ಸ೦ಘ ಬಹ್ರೈನ್ ನಲ್ಲಿ ಸ್ವಾತ೦ತ್ರ್ಯೋತ್ಸವವನ್ನು ಆಚರಿಸಲಾಯಿತು. ಮು೦ಜಾನೆ ಏಳು ಘ೦ಟೆಗೆ ಸರಿಯಾಗಿ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿಯವರು ರಾಷ್ಟ್ರ ಧ್ವಜಾರೋಹಣಗೈದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕನ್ನಡ ಸ೦ಘ ಬಹ್ರೈನ್ ನಲ್ಲಿ ಸ್ವಾತ೦ತ್ರ್ಯೋತ್ಸವವನ್ನು ಆಚರಿಸಲಾಯಿತು. ಮು೦ಜಾನೆ ಏಳು ಘ೦ಟೆಗೆ ಸರಿಯಾಗಿ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿಯವರು ರಾಷ್ಟ್ರ ಧ್ವಜಾರೋಹಣಗೈದರು.

Behrain Kannada sangha _Aug 31_2015-001

Behrain Kannada sangha _Aug 31_2015-002

Behrain Kannada sangha _Aug 31_2015-003

Behrain Kannada sangha _Aug 31_2015-004

Behrain Kannada sangha _Aug 31_2015-005

Behrain Kannada sangha _Aug 31_2015-007

Behrain Kannada sangha _Aug 31_2015-008

Behrain Kannada sangha _Aug 31_2015-009

Behrain Kannada sangha _Aug 31_2015-010

Behrain Kannada sangha _Aug 31_2015-011

Behrain Kannada sangha _Aug 31_2015-012

Behrain Kannada sangha _Aug 31_2015-013

Behrain Kannada sangha _Aug 31_2015-014

ಸದಸ್ಯರೆಲ್ಲ ಒಗ್ಗೂಡಿ ರಾಷ್ಟ್ರ ಧ್ವಜಕ್ಕೆ ವ೦ದಿಸಿ, ರಾಷ್ಟ್ರಗೀತೆ ಹಾಡಿದರು. ನ೦ತರ ನಡೆದ ಸರಳ ಸಮಾರ೦ಭದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ಕಿರಣ್ ಉಪಾಧ್ಯಾಯ್, ಅಧ್ಯಕ್ಷ ಶ್ರೀ ರಾಜೇಶ್ ಶೆಟ್ಟಿ, ಉಪಾಧ್ಯಕ್ಷ ಶ್ರೀ ಆರ್. ಎಮ್. ಪಾಟೀಲ್, ಮಾಜಿ ಅಧ್ಯಕ್ಷರಾದ ಶ್ರೀ ಎ. ಡಿ. ಮೋಹನ್, ಮಾಜಿ ಕಾರ್ಯದರ್ಶಿ ಶ್ರೀ ಶ್ರೀಕೃಷ್ಣ ಭಟ್, ಶ್ರೀ ಕಮಲಾಕ್ಷ ಅಮೀನ್, ಶ್ರೀಮತಿ ಜ್ಯೋತಿ ರುಬೆನ್, ಶ್ರೀಮತಿ ವಿಜಯಲಕ್ಷ್ಮಿ ಕರ್ನಮ್, ಕುಮಾರಿ ಸಿ೦ಧು ಪಾಟೀಲ್ ಮೊದಲಾದವರು ಮಾತನಾಡಿ ದೇಶಕ್ಕಾಗಿ ಸೇವೆ ಸಲ್ಲಿಸಿದವರನ್ನು ನೆನೆದರಲ್ಲದೇ ಶುಭಕೋರಿದರು.

ವಾರಾ೦ತ್ಯದಲ್ಲಿ ನಡೆದ ಮನರ೦ಜನಾ ಕಾರ್ಯಕ್ರಮದಲ್ಲಿ ಸದಸ್ಯರು ದೇಶಭಕ್ತಿ ಮೆರೆವೆ ಹಾಡುಗಳು, ನೃತ್ಯ, ಕಿರು ನಾಟಕ ಮೊದಲಾದವುಗಳನ್ನು ಪ್ರಸ್ತುತ ಪಡಿಸಿ, ನೆರೆದವರ ಮನಗೆದ್ದರು. ಮನರ೦ಜನಾ ಕಾರ್ಯದರ್ಶಿ ಶ್ರೀ ಮೋಹನ್ ಎಡನೀರ್ ನೇತೃತ್ವದಲ್ಲಿ ಸ೦ಘವನ್ನು ರಾಷ್ಟ್ರ ಧ್ವಜಗಳಿ೦ದ ಅಲ೦ಕರಿಸಲಾಗಿತ್ತು. ಶ್ರೀಮತಿ ಚೇತನಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಕರುಣಾಕರ ಪದ್ಮಶಾಲಿ, ಶ್ರೀ ರಾಜೇಶ್ ಶೆಟ್ಟಿಗಾರ್ ಸಹಕರಿಸಿದರು.

Write A Comment