ಉತ್ತರಕನ್ನಡ/ಕುಮಟಾ: ಮಂಗಳವಾರ ಬೆಳಿಗ್ಗೆನ ಜಾವದ ಸುಮಾರಿಗೆ ಕಾರವಾರದ ಕುಮುಟಾ ಸಮೀಪದ ಬರ್ಗಿ ಎಂಬಲ್ಲಿ ಮಂಗಳೂರಿನಿಂದ ಗೋವಾ ಕಡೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ನಡು ರಸ್ತೆಯಲ್ಲಿ ಹೊತ್ತಿ ಉರಿದು ಪಲ್ಟಿಯಾಗಿ 8 ಮಂದಿ ಗಂಭೀರ ಗಾಯಗೊಂಡು 50ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗೊಂಡಿದ್ದಾರೆ. 5ಕ್ಕೂ ಹೆಚ್ಚು ಮನೆಗಳು ಭಸ್ಮಗೊಂಡಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಹಲವು ಮನೆಗಳ ಛಾವಣಿಗಳು ಸುಟ್ಟುಕರಕಲಾಗಿದೆ. ಗೋಡೆಗಳು ಕುಸಿದಿದೆ. ಸುಮಾರು 800 ಮೀ ವ್ಯಾತಿಯವರೆಗೂ ಸ್ಪೋಟದ ತೀವ್ರತೆ ವ್ಯಾಪಿಸಿದೆ. ತೆಂಗಿನಮರಗಳು ಹಾಗೂ ಅಡಿಕೆ, ಬಾಳೆ ಗಿಡಗಇಗೂ ವ್ಯಾಪಕ ಹಾನಿಯಾಗಿದೆ. ಇನ್ನು ದನಕರುಗಳು ಸೇರಿದಂತೆ ಪ್ರಾಣಿಗಳಿಗೂ ಬೆಂಕಿಯಿಂದ ಗಾಯಗಳಾಗಿದೆ.
ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿಯುತ್ತಿರುವ ಕಾರಣ ಹಲವು ದೂರಗಳಿಂದಲೇ ವಾಹನಗಳನ್ನು ತಡೆಹಿಡಿಯಲಾಗಿದ್ದು, ಹಲವು ಕಿ.ಮೀ. ದೂರದವರೆಗೂ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿದೆ. ಈಗಾಗಲೇ ಉತ್ತರಕನ್ನಡ ಸೇರಿದಂತೆ ಮಂಗಳೂರು, ಉಡುಪಿ ಹಾಗೂ ಕುಂದಪುರ ಸೇರಿದಂತೆ ವಿವಿದೆಡೆಗಳಿಂದ ಅಗ್ನಿಶಾಮಕ ವಾಹನಗಳು ಕುಮಟಾದತ್ತ ದೌಡಾಯಿಸಿದೆ.
(ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.)