ರಾಷ್ಟ್ರೀಯ

ಮಾಜಿ ಸೈನಿಕರ ಹೋರಾಟಕ್ಕೆ ಮಣಿದಿರುವ ನರೇಂದ್ರ ಮೋದಿ ಸರ್ಕಾರ: ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಜಾರಿ

Pinterest LinkedIn Tumblr

manohar-parrikar_650x488_51431919523

ನವದೆಹಲಿ: ಮಾಜಿ ಸೈನಿಕರ ದಶಕಗಳ ಬೇಡಿಕೆ ಕೊನೆಗೂ ಈಡೇರಿದೆ. ಒಂದು ಶ್ರೇಣಿ ಒಂದು ಪಿಂಚಣಿ (‌ಒಆರ್‌ಒಪಿ) ಯೋಜನೆಯನ್ನು ಸರ್ಕಾರ ಶನಿವಾರ ಪ್ರಕಟಿಸಿದೆ. ಈ ಮೂಲಕ ನಿವೃತ್ತ ಯೋಧರ 42 ವರ್ಷಗಳ ಬೇಡಿಕೆಗೆ ಈಡೇರಿದಂತಾಗಿದೆ.

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಘೋಷಿಸಿದರು. 2014ರ 1 ಜುಲೈರಿಂದ ಈ ಯೋಜನೆ ಪೂರ್ವಾನ್ವಯವಾಗಲಿದೆ. ಆದರೆ ಸ್ವಯಂ ನಿವೃತ್ತಿ ಪಡೆದವರಿಗೆ ಈ ಯೋಜನೆ ಅನ್ವಯವಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವಾಗತ: ‘ರಕ್ಷಣಾ ಸಚಿವರ ಹೇಳಿಕೆ ಕೇಳಿದೇವು. ಎಲ್ಲಾ ಮಾಜಿ ಯೋಧರ ಪರವಾಗಿ ನಾನು ಧನ್ಯವಾದ ಹೇಳುವೆ. ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ’ ಎಂದು ‌ಮಾಜಿ ಸೈನಿಕರ ಹೋರಾಟದ ನೇತೃತ್ವ ವಹಿಸಿದ್ದ ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ನುಡಿದಿದ್ದಾರೆ.

Write A Comment