ಚೆನ್ನೈ: ಚೆನ್ನೈ ನ 16 -21 ವರ್ಷದ ಮೂರು ಲಕ್ಷ ಯುವಕರು ಪ್ರತಿದಿನ ಪೋರ್ನ್ ವೀಕ್ಷಿಸುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.
ಸಾಮಾಜಿಕ ವಿಷಯಗಳ ಬಗ್ಗೆ ಕಾರ್ಯನಿರ್ವಹಿಸುವ ರೆಸ್ಕ್ಯೂ ಎಂಬ ಎನ್.ಜಿ.ಒ ನಡೆಸಿರುವ ಸಮೀಕ್ಷೆಯಲ್ಲಿ 16 -21 ವರ್ಷದ ಶೇ.84 ರಷ್ಟು ಯುವಕರಿಗೆ ಪೋರ್ನ್ ವೀಕ್ಷಿಸುವುದು ಒಂದು ರೀತಿಯ ಚಟವಾಗಿದೆ ಎಂಬ ಅಂಶ ಬಯಲಾಗಿದೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸಿತ್ತು, ಅನಂತರದ ದಿನಗಳಲ್ಲಿ ನಿಷೇಧವನ್ನು ತೆರವುಗೊಳಿಸಿತ್ತು. ಆದರೆ ಎನ್.ಜಿ.ಒ ಕಾರಕರ್ತರು, ಪೋರ್ನ್ ವೆಬ್ ಸೈಟ್ ಗಳಿಗೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರದ ಹಿಂದಿನ ನಿರ್ಧಾರ ಸರಿಯಾಗಿತ್ತು ಎಂದು ಹೇಳಿದ್ದಾರೆ.
ಯುವಕರು ಅತ್ಯಾಚಾರ ಹಾಗೂ ಪೋರ್ನ್ ವೀಕ್ಷಿಸುವುದಕ್ಕೂ ಭಾರತದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವುದಕ್ಕೂ ಸಂಬಂಧವಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ರೆಸ್ಕ್ಯೂ ಎನ್.ಜಿ.ಒದ ಸಿ.ಇ.ಒ ಅಭಿಷೇಕ್ ಅಭಿಪ್ರಾಯಪಟ್ಟಿದ್ದಾರೆ.
10 ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಮೀಕ್ಷೆಗೊಳಪಡಿಸಲಾಗಿದೆ. ಶೇ.75 ರಷ್ಟು ವಿದ್ಯಾರ್ಥಿಗಳು 10 ನೇ ತರಗತಿ ಓದುತ್ತಿದ್ದಾಗ ಪೋರ್ನ್ ವೀಕ್ಷಿಸಲು ಪ್ರಾರಂಭ ಮಾಡಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ. ಕಾಲೇಜು ವಿದ್ಯಾರ್ಥಿಗಳು ಪ್ರತಿ ವಾರ 7 ಗಂಟೆ ಪೋರ್ನ್ ವೀಕ್ಷಿಸುತ್ತಾರೆ. ಈ ಪೈಕಿ ಶೇ.65 ರಷ್ಟು ವಿದ್ಯಾರ್ಥಿಗಳ ಮೇಲೆ ಪೋರ್ನ್, ರೇಪ್ ವಿಡಿಯೋಗಳು ಗಂಭೀರ ಪರಿಣಾಮ ಬೀರುತ್ತವೆ. ಇದರಿಂದಾಗಿ ಪ್ರತಿ ವರ್ಷ 1300 ಅತ್ಯಾಚಾರಿಗಳು ತಯಾರಾಗುತ್ತಿದ್ದಾರೆ ಎಂದು ಎನ್ ಜಿ.ಒ ಆತಂಕ ವ್ಯಕ್ತಪಡಿಸಿದೆ.