ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರವಿವಾರ ಕರಾವಳಿಯಾದ್ಯಂತ ಮೊಸರು ಕುಡಿಕೆ ಉತ್ಸಾವ ಬಹಳ ಸಡಗರ- ಸಂಭ್ರಮದಿಂದ ಜರಗಿತ್ತು.
ನಗರದ ವಿವಿದೆಡೆಗಳಲ್ಲಿ ಸಂಜೆಯ ಬಳಿಕ ಮೊಸರುಕುಡಿಕೆ ಸಂಭ್ರಮವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತ್ತು . ಮಂಗಳೂರು ಸುತ್ತಮುತ್ತ ಪ್ರದೇಶಗಳು ಮಾತ್ರವಲ್ಲದೇ ಜಿಲ್ಲೆಯ ವಿವಿಧ ಸ್ಥಳಗಳಾದ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ವಿಟ್ಲ, ಕಲ್ಲಡ್ಕ, ತೊಕ್ಕೂಟು, ಉಳ್ಳಾಲ, ತಲಪಾಡಿ, ಮೂಡಬಿದಿರೆ, ಬಜಪೆ, ಮೂಲ್ಕಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಭಾಗಗಳಲ್ಲಿ ಸಾರ್ವಜನಿಕರು ಮೊಸರುಕುಡಿಕೆ ಉತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ರಸ್ತೆಯ ಎರಡೂ ಬದಿಗಳಲ್ಲಿ ಕಂಬ ನೆಟ್ಟು ಅದನ್ನು ಮೇಲೆ ಜೋಡಿಸಿ, ಅದರ ಮೇಲೆ ಮೊಸರು ( ಬಣ್ಣದ ನೀರು ತುಂಬಿದ ಮಡಿಕೆ) ಕುಡಿಕೆಗಳನ್ನು ಕಟ್ಟಿದ್ದರು. ವಿವಿಧ ಸಂಘ – ಸಂಸ್ಥೆಗಳ ಯುವಕರ ತಂಡಗಳು ಮಾನವ ಪಿರಮಿಡ್ ನಿರ್ಮಿಸುವ ಮೂಲಕ ಈ ಮೊಸರು ಕುಡಿಕೆಗಳನ್ನು ಒಡೆದು ಸಂಭ್ರಮಪಟ್ಟರು.
ಗಮನ ಸೆಳೆದ ಶ್ರೀ ಕೃಷ್ಣ ವೇಷ ಸ್ಪರ್ಧೆ :
ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜೊತೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರಿತಿಕ ಕಾರ್ಯಕ್ರಮಗಳು ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನೆರೆವೇರಿದವು. ಪುಟಾಣೆಗಳು ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸಂಭ್ರಮ ಪಟ್ಟರು. ಎಲ್ಲೆಡೆ ಪುಟಾಣಿಗಳ ಶ್ರೀ ಕೃಷ್ಣ ವೇಷ ಗಮನ ಸೆಳೆಯಿತು.