ಮನೋರಂಜನೆ

ಮಗಳ ಮದುವೆ ನಂತರ ಬಿಡುವು ಮಾಡದೆ ಶೂಟಿಂಗ್ ಗೆ ತೆರಳಿದ ಶಿವಣ್ಣ !

Pinterest LinkedIn Tumblr

shivarajkumar

ಬೆಂಗಳೂರು: ಮಗಳ ಮದುವೆಯ ನಂತರ ಯಾವುದೇ ವಿರಾಮ ಪಡೆಯದೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೆಲವೇ ಗಂಟೆಗಳಲ್ಲಿ ತಮ್ಮ ಕೆಲಸಕ್ಕೆ ಹಿಂದಿರುಗಿದ್ದಾರೆ.

1986 ರಲ್ಲಿ ತಮ್ಮ 24 ನೆ ವಯಸ್ಸಿನಲ್ಲಿ ‘ಆನಂದ್’ ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಶಿವಣ್ಣನವರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ. ವಯಸ್ಸು ಹೆಚ್ಚಾದಂತೆ ಅವರು ಕಾಯಕದಲ್ಲಿ ಹೆಚ್ಚಿನ ಶ್ರದ್ಧೆ ಮೈಗೂಡಿಸಿಕೊಳ್ಳುತ್ತಿದ್ದಾರೆ. ಮಗಳ ಮದುವೆಯ ನಂತರ ಯಾವುದೇ ವಿರಾಮ ತೆಗೆದುಕೊಳ್ಳದೆ ಕೆಲವೇ ಗಂಟೆಗಳಲ್ಲಿ ತಾವು ಮುಗಿಸಬೇಕಾದ ಚಿತ್ರಗಳ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ವಯಸ್ಸಿನಲ್ಲಿ ಕಾರ್ಯನಿರತರಾಗಿವುದೇ ಉತ್ತಮ ಎನ್ನುವ ಶಿವರಾಜ್ ಕುಮಾರ್ ಸದ್ಯಕ್ಕೆ ‘ಶಿವಲಿಂಗ’ ಸಿನೆಮಾದ ಡಬ್ಬಿಂಗ್ ನಡೆಸುತ್ತಿದ್ದು, ನಾಳೆಯಿಂದ ‘ಕಿಲ್ಲಿಂಗ್ ವೀರಪ್ಪನ್’ ಸಿನೆಮಾದ ಸೆಟ್ ಸೇರಲಿದ್ದು, ಬಾಕಿಯುಳಿದ ಕೊನೆಯ ಹಂತದ ಚಿತ್ರೀಕರಣ ಸಂಪೂರ್ಣಗೊಳಿಸಲಿದ್ದಾರಂತೆ.

ತಮ್ಮ ಮುಂದಿನ ಸಿನೆಮಾಗಳ ಬಗ್ಗೆ ಮಾತನಾಡಿದ ಶಿವಣ್ಣ “ಅಕ್ಟೋಬರ್ ಎರಡನೇ ವಾರದಿಂದ ಕಬೀರ ಚಿತ್ರ ತಂಡ ಸೇರಲಿದ್ದೇನೆ. ನಂತರದ ‘ಶ್ರೀಕಂಠ’ ಆನಂತರ ಯೋಗಿ ಜಿ ರಾಜ್ ಅವರ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಜಯಣ್ಣ ನಿರ್ಮಾಣ ಸಂಸ್ಥೆಯಡಿ ಪ್ರಾರಂಭವಾಗಲಿದೆ. ಇದರ ಜೊತೆಜೊತೆಗೆ ‘ಖದರ್’ ನಲ್ಲೂ ಕೆಲಸ ಮಾಡಲಿದ್ದೇನೆ” ಎನ್ನುತ್ತಾರೆ.

ತಂದೆಯಾಗಿದ್ದರೂ, ನಿಮ್ಮ ಚರ್ಮ ಸುಕ್ಕಗಿದ್ದಾಗ ಹೃದಯ ಸದಾ ಯುವಚೇತನದಿಂತರಬೇಕು, ಆಗ ಈ ವಯಸ್ಸಿನ ತೊಂದರೆಯನ್ನು ಗೆಲ್ಲಬಹುದು ಎನ್ನುವ ಶಿವರಾಜ್ “ಮಗಳು ನಿರುಪಮಾ ಮನೆ ತೊರೆದಾಗ ಸ್ವಲ್ಪ ಭಾವನಾತ್ಮಕನಾದೆ. ಆದರೆ ಎಲ್ಲ ಹೆಣ್ಣುಮಕ್ಕಳ ಜೊತೆ ಹೀಗಾಗುತ್ತದೆ. ಆದರೆ ಮಾವನಾಗುವ ಅವಕಾಶ ಸಿಕ್ಕಿದೆ. ದಿಲೀಪ್ (ಅಳಿಯ) ಒಳ್ಳೆಯ ಮನುಷ್ಯ” ಎನ್ನುತ್ತಾರೆ.

Write A Comment