ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಬನ್ನಂಜೆಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬನ್ನಂಜೆಯನ್ನು ಉಡುಪಿಯ ಹಿರಿಯಡ್ಕದ ಕಾರಾಗ್ರಹಕ್ಕೆ ಕಳುಹಿಸಲಾಗಿದೆ.
ಐರೋಡಿಯ ಜುವೆಲ್ಲರಿ ಶಾಪ್ ಶೂಟೌಟ್ ಪ್ರಕರಣದಲ್ಲಿ ಬನ್ನಂಜೆ ರಾಜನಿಗೆ ಈ ಹಿಂದೆ 15 ದಿನಗಳ ಪೊಲೀಸ್ ಕಸ್ಟಡಿ ನೀಡಿತ್ತು. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಆತನನ್ನು ಇಂದು ಉಡುಪಿ ಪ್ರಧಾನ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆತನಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿಯ ಕಲ್ಯಾಣಪುರ ಸಂತೆಕಟ್ಟೆ ಎಂಬಲಿನ ಆನಂದ ಶೆಟ್ಟಿ ಎನ್ನುವವರಿಗೆ ಬೆದರಿಕೆ ಕರೆ ಹಗೂ ಹಪ್ತಾ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.8 (ನಾಳೆ) ಮಂಗಳವಾರ ಬನ್ನಂಜೆಯ ಬಾಡಿ ವಾರಂಟ್ ಪಡೆದು ಪೊಲೀಸ್ ಕಸ್ಟಡಿಗೆ ಕೇಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ. ನಾಳೆಯು ಬನ್ನಂಜೆಯನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತದೆ. ಆರೋಪಿ ಬನ್ನಂಜೆ ವಿರುದ್ಧ ವಕೀಲೆ ಶಾಂತಿ ಬಾಯಿ ಹಾಗೂ ಬನ್ನಂಜೆ ಪರ ವಕೀಲ ಅಮರ್ ವಾದ ನಡೆಸಿದ್ದಾರೆ.
ಬನ್ನಂಜೆಯನ್ನು ಆ.14 ರಂದು ಮೊರಕ್ಕೋದಿಂದ ಭಾರತಕ್ಕೆ ಕರೆತಂದು ವಿವಿಧ ಕೇಸುಗಳ ವಿಚಾರಣೆಗಾಗಿ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದರು.