ರಾಷ್ಟ್ರೀಯ

ಭಾರತೀಯರನ್ನು ಸದ್ದಿಲ್ಲದೆ ಕೊಲ್ಲುತ್ತಿವೆ ಬಿಪಿ, ಷುಗರ್, ಸ್ಮೋಕ್, ಮದ್ಯ ಮಾಲಿನ್ಯ..!

Pinterest LinkedIn Tumblr

dia

ನವದೆಹಲಿ, ಸೆ.12: ಭಾರತೀಯರನ್ನು ಸದ್ದಿಲ್ಲದೆ ಕೊಲ್ಲುವ ಗುತ್ಗಿಗೆ ಹಿಡಿದಂತೆ ವ್ಯಾಪಿಸಿರುವ ರೋಗಗಳೆಂದರೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಧೂಮಪಾನ ಹಾಗೂ ಮಾಲಿನ್ಯಗಳು. ಈ ಹಿಂದೆ ಅಪೌಷ್ಠಿಕತೆ ಸಾವಿಗೆ ಪ್ರಮುಖ ಕಾರಣವಾಗಿತ್ತು. ಆದರೆ, ಅದೀಗ ಸುಧಾರಿಸಿದೆ ಎನ್ನುತ್ತದೆ ವರದಿ. 1990ರಿಂದ 2013ರ ವರೆಗಿನ ಅಂಕಿ-ಅಂಶಗಳನ್ನು ಗಮ ನಿಸಿದರೆ, ಶೇ.60ರಷ್ಟು ಭಾರತೀಯರು ಈ ಕಾರಣಗಳಿಂದ ಮೃತ್ಯು ಹೊಂದುತ್ತಿದ್ದಾರೆ. ಮದ್ಯಪಾನದಿಂದ ಸಾಯುವವರ ಸಂಖ್ಯೆ ಶೇ.97 ರಷ್ಟಿದೆ ಎಂದು ವಾಷಿಂಗ್ಟನ್ ಯೂನಿ ವರ್ಸಿಟಿ ನಡೆಸಿದ ಸಮೀಕ್ಷೆಯಿಂದ ಬಯಲಾಗಿದೆ.

ವಾಷಿಂಗ್ಟನ್ ವಿಶ್ವ ವಿದ್ಯಾ ನಿಲಯವು ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾ (ಸಿಎಚ್‌ಎಫ್‌ಐ) ಸಮೀಕ್ಷೆ ನಡೆಸಿದಾಗ ಕಳೆದ 25 ವರ್ಷಗಳ ಅವಧಿಯಲ್ಲಿ ಈ ಕಾಯಿಲೆಗಳಿಗೆ ಅಕಾಲಿಕವಾಗಿ ಸಾವನ್ನಪ್ಪಿರುವವರ ಸಂಖ್ಯೆ ಅದರ ಹಿಂದಿಗಿಂತ ದುಪ್ಪಟ್ಟು ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ.

1990ಕ್ಕಿಂತ ಹಿಂದೆ ಭಾರತ ದಲ್ಲಿ ಅಪೌಷ್ಠಿಕತೆ ದೊಡ್ಡ ಪಿಡು ಗಾಗಿತ್ತು. ಆದರೆ, ಅದರ ನಂತರ ರಕ್ತದೊತ್ತಡ(ಬಿಸಿ), ಸಕ್ಕರೆ ಕಾಯಿಲೆ(ಷುಗರ್), ಧೂಮಪಾನ ಗಳು ಭಾರಿ ಪ್ರಮಾಣದಲ್ಲಿ ಜೀವಗಳ ಬಲಿ ತೆಗೆದುಕೊಳ್ಳುತ್ತೇನೆ. ಈ ಕಾಯಿಲೆಗಳಿಗಿಂತ ಇನ್ನು ಎರಡನೇ ಸ್ಥಾನದಲ್ಲಿರುವ ಸಾವಿನ ಅಂಶಗಳೆಂದರೆ ಅಶುದ್ಧ ಕುಡಿಯುವ ನೀರು ಮತ್ತು ತಂಬಾಕು ಸೇವನೆಗಳು. ಇವೂ ಕೂಡ ಭಾರತೀಯರ ಸಾವಿಗೆ ತಮ್ಮದೇ ಆದ ಕೊಡುಗೆ ನೀಡುತ್ತೇವೆ. ಮಿಲಿಯನ್‌ಗಟ್ಟಲೆ ಜನ ಈ ಅನಿಷ್ಟ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಪಿಎಚ್ ಎಫ್‌ಐ ಮುಖ್ಯಸ್ಥ ಪ್ರೊ.ಲಲಿತ್ ದಂಡೋನಾ ಹೇಳಿದ್ದಾರೆ.

Write A Comment