ಅಂತರಾಷ್ಟ್ರೀಯ

42 ವರ್ಷದ ನಂತರ ಬಡ್ಡಿದರ ಇಳಿಸಿದ ಪಾಕಿಸ್ತಾನ

Pinterest LinkedIn Tumblr

pak-bankಪಾಕಿಸ್ತಾನ ಕೇಂದ್ರ ಬ್ಯಾಂಕ್, ಬರೋಬ್ಬರಿ 42 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಡ್ಡಿದರವನ್ನು ಶೇಕಡ 6ಕ್ಕೆ ಕಡಿತ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಹಣದುಬ್ಬರದಿಂದಾಗಿ ಪಾಕಿಸ್ತಾನದ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈಗಷ್ಟೇ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ.

ಈ ಹಿನ್ನೆಲೆಯಲ್ಲಿ ಹೂಡಿಕೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ದರ ಕಡಿತ ಮಾಡಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದ ಸಹಯೋಗದಲ್ಲಿ  ನಿರ್ಮಾಣವಾಗುತ್ತಿರುವ ಆರ್ಥಿಕ ಕಾರಿಡಾರ್‍ನಿಂದಾಗಿ ಭಾರಿ ಪ್ರಮಾಣದ ಹೂಡಿಕೆ ಹರಿದುಬರಲಿದೆ ಎನ್ನುವ ವಿಶ್ವಾಸವನ್ನು ಅಲ್ಲಿನ ಕೇಂದ್ರ ಬ್ಯಾಂಕ್ ವ್ಯಕ್ತಪಡಿಸಿದೆ.

Write A Comment