ಮುಂಬೈ

ಮುಂಬೈನ ಲಿಂಕನ್ ಪ್ಯಾಲೆಸ್ ಬರೊಬ್ಬರಿ 750 ಕೋಟಿಗೆ ಪುಣೆ ಮೂಲದ ಉಧ್ಯಮಿ ಸೈರಸ್ ಪೂನಾವಾಲಾರಿಂದ ಖರೀದಿ

Pinterest LinkedIn Tumblr

Lincoln-House ಮುಂಬೈನ ಐತಿಹಾಸಿಕ ಲಿಂಕನ್ ಪ್ಯಾಲೆಸ್ ಬರೊಬ್ಬರಿ 750 ಕೋಟಿಗೆ ಬಿಕರಿಯಾಗಿದ್ದು, ಪುಣೆ ಮೂಲದ ಉಧ್ಯಮಿ ಸೈರಸ್ ಪೂನಾವಾಲಾ ಅವರು ಈ ಅರಮನೆಯನ್ನು ಹರಾಜು  ಮೂಲಕ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಮುಂಬೈನ ಪ್ರತಿಷ್ಠಿತ ಬ್ರೀಚ್ ಕ್ಯಾಂಡಿ ಪ್ರದೇಶದಲ್ಲಿರುವ ಲಿಂಕನ್ ಹೌಸ್ ಅನ್ನು ಪುಣೆ ಮೂಲದ ಉಧ್ಯಮಿ ಸೈರಸ್ ಪೂನಾವಾಲಾ ಅವರು ಬರೊಬ್ಬರಿ 750 ಕೋಟಿ ರು.ಗಳಿಗೆ  ಖರೀದಿಸಿದ್ದಾರೆ. ಆ ಮೂಲಕ ಜತಿಯಾ ಹೌಸ್ ಖರೀದಿ ಹೆಸರಿನಲ್ಲಿದ್ದ ಅತಿ ಹೆಚ್ಚಿನ ದರಕ್ಕೆ ಮಾರಾಟವಾದ ಬಂಗಲೆ ಎಂಬ ಖ್ಯಾತಿಗೆ ಲಿಂಕನ್ ಹೌಸ್ ಪಾತ್ರವಾಗಿದೆ.

ಆರಂಭದಲ್ಲಿ ಇದನ್ನು ವಾಂಕ್ನೇರ್ ಪ್ಯಾಲೆಸ್ ಎಂದು ಕರೆಯಲಾಗುತ್ತಿತ್ತಾದರೂ, 1957ರಲ್ಲಿ ಇದನ್ನು ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳ ನಿವಾಸವಾಗಿ ಮಾರ್ಪಡಿಸಲಾಗಿತ್ತು. ಬಳಿಕ ಈ  ಬಂಗಲೆ ಲಿಂಕನ್ ಹೌಸ್ ಎಂದು ಖ್ಯಾತಿಯಾಯಿತು. 2011ರಲ್ಲಿ ಈ ಭವ್ಯ ಭಂಗಲೆಯನ್ನು ಮಾರಾಟಕ್ಕಿಟ್ಟ ಅಮೆರಿಕ ಸರ್ಕಾರ, ಇದರ ಬೆಲೆ ಬರೋಬ್ಬರಿ 830 ಕೋಟಿ ರುಪಾಯಿ ಎಂದು  ಘೋಷಿಸಿತು. ಈ ದುಬಾರಿ ಬೆಲೆ ಕೊಟ್ಟು ಕೊಳ್ಳಲು ಯಾವ ಉದ್ಯಮಿಗಳು ಮುಂದೆ ಬಾರದ ಹಿನ್ನಲೆಯಲ್ಲಿ ಪ್ರಸ್ತುತ 750 ಕೋಟಿ ರು. ಕೊಟ್ಟು ಸೈರಸ್ ಪೂನಾವಾಲಾ ಅವರು ಖರೀದಿಸಿದ್ದಾರೆ.

1966ರಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ಕಂಡು ಹಿಡಿದ ಸೆರಮ್ ಸಂಸ್ಥೆ ಮುಖ್ಯಸ್ಥರಾಗಿರುವ ಸೈರಸ್ ಪೂನಾವಾಲಾ ಅವರು ಪ್ರಸ್ತುತ ಈ ಭವ್ಯ ಬಂಗಲೆಯನ್ನು ಖರೀದಿ ಮಾಡುವ ಮೂಲಕ ದುಬಾರಿ  ಬಂಗಲೆ ಖರೀದಿಸಿದ ಖ್ಯಾತಿ ಗಳಿಸಿದ್ದಾರೆ.

ಈ ಹಿಂದೆ ಕಳೆದ ಮಂಗಳವಾರ ಬಿರ್ಲಾ ಸಂಸ್ಥೆ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಅವರು, ಮುಂಬೈ ಮಲಬಾರ್ ಹಿಲ್ಸ್ ನಲ್ಲಿರುವ ಜತಿಯಾ ಹೌಸ್ ಅನ್ನು ಹರಾಜು ಪ್ರಕ್ರಿಯೆ ಮೂಲಕ  ಸುಮಾರು 425 ಕೋಟಿ ನೀಡಿ ಖರೀದಿಸಿದ್ದರು. ಹೀಗಾಗಿ ಜತಿಯಾ ಹೌಸ್ ಅತಿಹೆಚ್ಚಿನ ದರಕ್ಕೆ ಮಾರಾಟವಾದ ಬಂಗಲೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಇದೀಗ ಸೈರಸ್ ಪೂನಾವಾಲಾ  ಅವರು ಬರೊಬ್ಬರಿ 750 ಕೋಟಿ ರು.ಗಳನ್ನು ವ್ಯಯಿಸಿ ಲಿಂಕನ್ ಹೌಸ್ ಅನ್ನು ಖರೀದಿ ಮಾಡುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Write A Comment