ಬೆಂಗಳೂರು, ಸೆ.20-ಕಾರ್ ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿಕೊಂಡು 7 ಕಾರ್‌ಗಳು ಸುಟ್ಟು ಕರಕಲಾಗಿರುವ ಘಟನೆ ಡಿ.ಜೆ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಲ್‌ಆರ್ ಬಂಡೆ ಬಳಿಯಿರುವ ಕಾರ್ ಗ್ಯಾರೇಜಿನಲ್ಲಿ ಬೆಳಗಿನ ಜಾವ ಬೆಂಕಿ ಆಕಸ್ಮಿಕ ಸಂಭವಿಸಿದೆ. ಬೆಳಗಿನ ಜಾವ 4.30ರಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಗ್ಯಾರೇಜನ್ನು ಆವರಿಸಿ ಅಲ್ಲಿದ್ದ 7 ಕಾರ್‌ಗಳನ್ನು ಆಹುತಿಗೆ ತೆಗೆದುಕೊಂಡಿದೆ.
ಗ್ಯಾರೇಜ್‌ನಲ್ಲಿದ್ದ ಕಾರುಗಳ ದುರಸ್ತಿಗಾಗಿ ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಶಾರ್‌್ಜಸರ್ಕ್ಯೂಟ್‌ನಿಂದ ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರಬೇಕೆಂದು ಪೊಲೀಸರು ತಿಳಿಸಿದ್ಧಾರೆ. ಡಿ.ಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.