ಬಾಲಿವುಡ್ ನಟ ನಾನಾ ಪಾಟೇಕರ್ ರೈತ ಕುಟುಂಬಗಳಿಗೆ ಸಹಾಯ ಮಾಡುತ್ತಿರುವ ಬೆನ್ನಲ್ಲೇ ಬಿಟೌನ್’ನ ಆ್ಯಕ್ಷನ್ ಕಿಲಾಡಿ ಅಕ್ಷಯ್ ಕುಮಾರ್ ಕೂಡ ರೈತರ ನೆರವು ನೀಡಲು ಮುಂದಾಗಿದ್ದಾರೆ.
ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಯ ರೈತರ ಸಹಾಯಕ್ಕಾಗಿ ಅಕ್ಕಿ ಭಾಯ್ 90 ಲಕ್ಷ ರೂ. ದಾನ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ಈ ಮಹಾ ಕಾರ್ಯವನ್ನು ಪ್ರಚಾರದಿಂದ ದೂರವಿರಿಸಿರುವ ಸಿಂಗ್ ಇಸ್ ಕಿಂಗ್ ಅಕ್ಷಯ್ ಮುಂದಿನ 6 ತಿಂಗಳಲ್ಲಿ ಪ್ರತಿ ಜಿಲ್ಲೆಯ 30 ರೈತರಿಗೆ 50ಸಾವಿರ ರೂ.ನಂತೆ ಆರ್ಥಿಕ ನೆರವು ನೀಡಲಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ನಟ ನಾನಾ ಪಾಟೇಕರ್ ಹಾಗೂ ಕ್ರಿಕೆಟರ್ ಅಂಜಿಕೆ ರಹಾನೆ ಮಹಾರಾಷ್ಟ್ರದ ರೈತ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಈಗ ಅಕ್ಷಯ್ ಕುಮಾರ್ ಕೂಡ ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಸಂತಸದ ವಿಚಾರ.
-ಕಪ್ಪು ಮೂಗುತ್ತಿ
-ಉದಯವಾಣಿ