ಕಾರಿನಲ್ಲಿ ಸೆಕ್ಸ್, ಪಾರ್ಕಿನಲ್ಲಿ ಹಸಿಬಿಸಿ ದೃಶ್ಯಗಳು ಇದೆಲ್ಲಾವಿದೇಶದಲ್ಲಿ ಕಾಮನ್. ಆದರೆ, ಇಲ್ಲೊಬ್ಬಳು ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯೊಬ್ಬನ ಜತೆ ಸೆಕ್ಸ್ನಲ್ಲಿ ತೊಡಗಿಕೊಂಡಿದ್ದಾಳೆ.
ಅದೂ ಕೂಡ ನಾಲ್ಕು ಮಂದಿ ಮರ್ಯಾದಸ್ತರು ಕಾರ್ ಪಾರ್ಕ್ ಮಾಡುವ ಜಾಗದಲ್ಲಿ. ವರ್ಜಿನಿಯಾದ ನಾರ್ ಫೋಕ್ ಪಟ್ಟಣದಲ್ಲಿ ಪಟ್ಟಣದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಕಿಂಬರ್ಲಿ ಎಂ. ಜಾಕ್ಸನ್ ಎಂಬಾಕೆ ಕಾರ್ ಪಾರ್ಕ್ ಮಾಡುವ ಸ್ಥಳದಲ್ಲೇ ತನ್ನ ಬಾಯ್ಫ್ರೆಂಡ್ ಜತೆ ರತಿ ಕ್ರೀಡೆ ಆರಂಭಿಸಿದ್ದಳು.
ಕಂಠ ಪೂರ್ತಿ ಕುಡಿದಿದ್ದರಿಂದ ಆಕೆಯ ಬಾಯ್ಫ್ರೆಂಡ್ ಪ್ರಜ್ಞೆ ತಪ್ಪಿ ಮಲಗಿದ್ದ. ಆದರೂ ಆಕೆಯ ರತಿ ಕ್ರೀಡೆ ಮುಂದುವರಿದೇ ಇತ್ತು. ಬಳಿಕ ಪೊಲೀಸರು ಬಂದು ಆಕೆಯನ್ನು ಬಂಧಿಸುವ ಮೂಲಕ ನಡುಬೀದಿ ಪ್ರಹಸನಕ್ಕೆ ತೆರೆ ಎಳೆದಿದ್ದಾರೆ. ಕೊನೆಗೆ ಇವರಿಬ್ಬರನ್ನೂ ನ್ಯೂಸ್ ಚಾನಲ್ವೊಂದು ಸಂದರ್ಶಿಸಿದ್ದು, ಸೆಕ್ಸ್ ಮಾಡುವ ಆತುರದಲ್ಲಿ ಇದೆಲ್ಲಾ ನಡೆದು ಹೋಯಿತು ಎಂದು ಹೇಳಿದ್ದಾರೆ. ಸಾರ್ವಜನಿಕವಾಗಿ ಮಾಡಬಾರದ್ದು ಮಾಡಿದರೂ ಧೈರ್ಯದಿಂದ ಟೀವಿ ಸಂದರ್ಶನ ನೀಡಿದ್ದಾರೆ!
-ಉದಯವಾಣಿ