ಕರ್ನಾಟಕ

ಪ್ರೊ. ಭಗವಾನ್‌ಗೆ ಬೆದರಿಕೆ ಕರೆ; ಕರೆ ಮಾಹಿತಿ ನೀಡುವಂತೆ ಟೆಲಿಕಾಂ ಸೇವಾದಾರರಿಗೆ ಪೊಲೀಸರ ಆದೇಶ

Pinterest LinkedIn Tumblr

prof_bhagwanಮೈಸೂರು: ಲೇಖಕ ಪ್ರೊ. ಭಗವಾನ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎಂಬ ದೂರಿನನ್ವಯ, ಬೆದರಿಕೆ ಕರೆಗಳು ಬಂದಿರುವ ಫೋನ್ ನಂಬರ್‌ಗಳ ಮಾಹಿತಿಯನ್ನು ಒದಗಿಸುವಂತೆ ಟೆಲಿಕಾಂ ಸೇವಾದಾರರಿಗೆ ಪೊಲೀಸ್ ಆದೇಶ ನೀಡಿದ್ದಾರೆ.

ಪ್ರೊ. ಭಗವಾನ್ ಅವರಿಗೆ ಬಂದಿರುವ ಬೆದರಿಕೆ ಕರೆಗಳ ವಿವರಗಳನ್ನು ಈಗಾಗಲೇ ಸಂಗ್ರಹಿಸಿಯಾಗಿದೆ. ಆ ದೂರವಾಣಿ ಸಂಖ್ಯೆಗಳನ್ನೀಗ ಟೆಲಿಕಾಂ ಸೇವಾದಾರರಿಗೆ ಕಳುಹಿಸಿಕೊಟ್ಟು  ಆ ಸಂಖ್ಯೆಗಳನ್ನು ಹೊಂದಿರುವವರ ವಿವರಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾನುವಾರ ಸಂಜೆ ಪ್ರೊ. ಭಗವಾನ್‌ರಿಗೆ 20 ಬೆದರಿಕೆ ಕರೆಗಳ ಬಂದಿದ್ದವು. ಇದರಲ್ಲಿ ಎರಡು ಕರೆಗಳು ಒಂದೇ ಮೊಬೈಲ್ ಸಂಖ್ಯೆಯಿಂದ ಮಾಡಿರುವುದಾಗಿದೆ. ಕರೆ ಮಾಡಿದ ವ್ಯಕ್ತಿಗಳು ಅವ್ಯಾಚ್ಯ ಪದಗಳನ್ನು ಬಳಸಿದ್ದರು ಎಂದು ಪ್ರೊ. ಭಗವಾನ್ ದೂರು ನೀಡಿದ್ದರು.

ಪ್ರೊ.ಭಗವಾನ್‌ರ ದೂರು ಸ್ವೀಕರಿಸಿದ ಕುವೆಂಪು ನಗರ ಪೊಲೀಸರು ದೂರಿಗೆ ಸಂಬಂಧಪಟ್ಟಂತೆ ಎಫ್‌ಐಆರ್ ದಾಖಲಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಭಗವಾನ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

Write A Comment