ಕರ್ನಾಟಕ

ಧಾರವಾಡ ಬಳಿ ಇಂಡಿಕಾ ಕಾರು – ಸರ್ಕಾರಿ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತ: ಸ್ಥಳದಲ್ಲೇ ಐವರ ಸಾವು

Pinterest LinkedIn Tumblr

accident

ಧಾರವಾಡ: ಇಂಡಿಕಾ ಕಾರು ಹಾಗೂ ಸರ್ಕಾರಿ ಬಸ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಎದುರು ನಡೆದಿದೆ.

ಹೆದ್ದಾರಿಯಲ್ಲಿ ಘಟನೆ: ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ಧಾರವಾಡದಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಂಡಿಕಾ ಕಾರಿನಲ್ಲಿ ಕೊಲ್ಹಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ, ಕೃಷಿ ವಿ.ವಿ ಎದುರು ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಚಾಲಕ, ಎದುರಿಗೆ ಬರುತ್ತಿದ್ದ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಛಿದ್ರಗೊಂಡಿದೆ. 0

ಐವರು ಸಾವು: ಘಟನೆಯಲ್ಲಿ ಮೃತಪಟ್ಟವರನ್ನು ಶಿವದೀಪ ಡಂಬಳ (23), ಅನೀಶ್ ಚಿಂಚೂರು, ಶಿವಕುಮಾರ್‌ ಮುತಗಿ, ಕಾರ್ತಿಕ್ ನಾಯಕ್‌, ಯುಗಾಂತ್ ಪಾಟೀಲ ಎಂದು ಗುರುತಿಸಲಾಗಿದೆ.

ಮೃತರ ವಿವರ: ಶಿವದೀಪ ಬಳ್ಳಾರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಡಂಬಳ ಅವರ ಪುತ್ರ. ಅನೀಶ್ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ದೀಪಕ್‌ ಚಿಂಚೂರ್ ಅವರ ಮಗ. ಶಿವಕುಮಾರ್ ವಾಹನದ ಚಾಲಕ. ಯುಗಾಂತ್ ಪಾಟೀಲ ಕೃಷಿ ವಿಜ್ಞಾನಿ ಎಸ್.ಎಸ್‌.ಪಾಟೀಲ ಅವರ ಸುಪುತ್ರ.

ಇಬ್ಬರಿಗೆ ಗಾಯ: ಘಟನೆಯಲ್ಲಿ ಬಾದಾಮಿಯ ಗೋವಿಂದಪ್ಪ ತಳವಾರ ಹಾಗೂ ರೋಣದ ಪ್ರಜ್ವಲ್ ಕುಮಾರಸ್ವಾಮಿ ಉಡುಪಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Write A Comment