ಮೌಂಟ್ ರೋಸರಿ ಕ್ಯಾಥೊಲಿಕ್ ಸ್ತ್ರೀ ಸಂಘಟನ, ರೋಟರಿ ಕ್ಲಬ್ ಮಣಿಪಾಲ ಟೌನ್, ರೋಟರಿ ಕ್ಲಬ್ ಕಲ್ಯಾಣ್ ಪುರ್ ಮತ್ತು ಐ ಸಿ ವೈ ಎಂ ಮೌಂಟ್ ರೋಸರಿ ಇವರುಗಳ ಸಹಯೋಗದಲ್ಲಿ ಇಂದು ದಿನಾಂಕ ಭಾನುವಾರ 2 ಅಕ್ಟೋಬರ್ 2015 ರಂದು ಉತ್ತಮ ಆರೋಗ್ಯಕ್ಕಾಗಿ ಕಲ್ಯಾಣಪುರದಲ್ಲಿ ವಾಕ್ ಅಂಡ್ ಜಾಗ್ ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು.
ಚರ್ಚ್ ನ ಫಾದರ್ ಫಿಲಿಪ್ ನೆರಿ ಅರನ್ಹ ಆಶೀರ್ವರ್ದಿಸಿ ದ್ವಜ ಬೀಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಜಿಲ್ಲಾ ಗವರ್ನರ್ ರೋ ಅಲೆನ್ ಲೆವಿಸ್ ಕಾರ್ಯಕ್ರಮದ ಆಯೋಜಕರಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ವಿನೋದ್ ನಾಯಕ್ ,ಅ ಮಣಿಪಾಲ್ ಮತ್ತು ಡಾ. ಕಿರಣ್ ಶೆಟ್ಟಿ ಮಣಿಪಾಲ ಇವರುಗಳು ಉತ್ತಮ ಆರೋಗ್ಯಕ್ಕಾಗಿ ವಾಕ್ ಮತ್ತು ಜಾಗ್ ನ ಪ್ರಯೋಜನಗಳ ಬಗ್ಗೆ ಮಾತನಾಡಿದರು. ರೊ. ಹಿಲ್ಡಾ ಲೆವಿಸ್ ಈ ಕಾರ್ಯಕ್ರಮದ ಸಂಯೋಜಕರಾಗಿದ್ದರು.
ಕಲ್ಯಾಣಪುರ ರೋಟರಿಯ ಅಧ್ಯಕ್ಷ ಪ್ರಶಾಂತ ಶೆಟ್ಟಿ ಸ್ವಾಗತಿಸಿ, ರೋಟರಿ ಮಣಿಪಾಲ್ ಟೌನ್ ನ ಅಧ್ಯಕ್ಷ ಡಾ ಸೇಸಪ್ಪ ಎ ರೈ ವಂದಿಸಿ, ಐ ಸಿ ವೈ ಎಂ ನ ಅಧ್ಯಕ್ಷ ವೆರ್ಹ್ನೆರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಚರ್ಚ್ ಮತ್ತು ಸುವರ್ಣಾ ನದಿಯ ನಡುವೆ ವಾಕಿಂಗ್ ಮತ್ತು ಜಾಗಿಂಗ್ ಮಾಡಿದ ನಂತರ ಮಣಿಪಾಲ ವಿಶ್ವನಿದ್ಯಾನಿಲಯದ ಕ್ರೀಡಾ ನಿರ್ದೇಶಕ ರೋ. ಶ್ರೀಧರ್, ಏರೋಬಿಕ್ಸ್ ತರಬೇತುದಾರರಾದ ಮಮತಾ ಶೆಟ್ಟಿ, ಯೋಗ ತರಬೇತುದಾರ ಪ್ರಜ್ವಲ್ ಕುಮಾರ್ ಇವರುಗಳು ಇವರುಗಳು ದಿನನಿತ್ಯ ಮಾಡಬಹುದಾದ ಸಾಧನಗಳನ್ನು ಪ್ರದರ್ಶಿಸಿ ತರಬೇತು ನೀಡಿದರು.
ಈ ಸಂದರ್ಭದಲ್ಲಿ ಫಾದರ್ ಮಹೇಶ್, ರೋ. ಕೆ ಎಸ್ ಜೈ ವಿಠಲ್, ರೋಟರಿ ಮಣಿಪಾಲ ಟೌನ್ ನ ಕಾರ್ಯದರ್ಶಿ ರೋ. ರಾಘವೇಂದ್ರ ಜಿ ಹಿರಿಯಡಕ, ಸ್ತ್ರೀ ಸಂಘಟನ ಅಧ್ಯಕ್ಷೆ ಜ್ಯೋತಿ ಲೆವಿಸ್ ಮತ್ತು ಈ ಎಲ್ಲ ಸಂಘಟನೆಗಳ ಪದಾದಿಕಾರಿಗಳು ಮತ್ತು ಹಲವಾರು ಸಾರ್ವಜನಿಕರು ಉಪಸ್ಥಿತರಿದ್ದರು. ಉಜ್ವಲ್ ಡೆವೆಲೊಪೆರ್ಸ್ ಉಡುಪಿ ಮತ್ತು ಆಕ಼ ಐಸ್ ಬರ್ಗ್ ಇವರುಗಳು ಭಾಗವಹಿಸಿದ ಎಲ್ಲರಿಗೂ ಟಿ-ಶರ್ಟ್ ನ್ನು ನೀಡಿ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದರು.