ಮುಂಬೈ

ಮುಸಲ್ಮಾನರಿಗೆ ನಮಾಜ್ ಮಾಡಲು ತನ್ನ ಅಂಗಡಿಯಲ್ಲಿ ಸ್ಥಳ ನೀಡಿದ ಹಿಂದೂ ವ್ಯಾಪಾರಿ !

Pinterest LinkedIn Tumblr

himu

ಮುಂಬಯಿ: ದಾದ್ರಿ ಪ್ರಕರಣದಿಂದ ಇಡೀ ಉತ್ತರ ಪ್ರದೇಶ ಹೊತ್ತಿ ಉರಿಯುತ್ತಿದೆ. ಜೊತೆಗೆ ಹಿಂದೂ ಮುಸ್ಲಿಮರಲ್ಲಿ ದ್ವೇಷದ ಕಿಡಿ ಹೊತ್ತಿಸುತ್ತಿದೆ. ಇದರ ಬೆನ್ನಲ್ಲೇ ಮುಂಬಯಿಯಲ್ಲಿ ಹಿಂದೂ ವ್ಯಾಪಾರಿಯೊಬ್ಬರು ಮುಸಲ್ಮಾನರಿಗೆ ನಮಾಜ್ ಮಾಡಲು ತನ್ನ ಅಂಗಡಿಯಲ್ಲಿ ಸ್ಥಳ ನೀಡಿ ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಮುಂಬಯಿಯ ಮುಕುಂದ ನಗರದಲ್ಲಿದ್ದ ಮಸೀದಿಯನ್ನು ಪುನರ್ ಅಭಿವೃದ್ಧಿಗಾಗಿ ಕೆಡವಲಾಗಿತ್ತು. ಇದರಿಂದ ಅಲ್ಲಿದ್ದ ಮುಸ್ಲಿಮರು ಒಟ್ಟಾಗಿ ನಮಾಜ್ ಮಾಡಲು ಜಾಗದ ಸಮಸ್ಯೆ ಉಂಟಾಯಿತು.

ಮುಕುಂದ ನಗರದಲ್ಲಿದ್ದ ಮಸೀದಿ ಎದುರಿದ್ದ ಲೆದರ್ ವ್ಯಾಪಾರಿ ದಿಲೀಪ್ ಕಾಳೆ ಅವರ ಬಳಿ ಬಂದ ಕೆಲ ಮುಸ್ಲಿಮರು ತಮ್ಮ ಅಂಗಡಿಯಲ್ಲಿ ನಮಾಜ್ ಮಾಡಲು ಸ್ಥಳ ನೀಡುವಂತೆ ಮನವಿ ಮಾಡಿದರು. ಯಾವುದೇ ರೀತಿ ಹಿಂಜರಿಯದೇ ದಿಲೀಪ್ ಕಾಳೆ ತಮ್ಮ ಅಂಗಡಿಯ 2.500 ಚದರ ಅಡಿ ಜಾಗವನ್ನು ನಮಾಜ್ ಗಾಗಿ ಬಿಟ್ಟುಕೊಟ್ಟಿದ್ದಾರೆ.

40 ವರ್ಷದಿಂದ ಇದೇ ಪ್ರದೇಶದಲ್ಲಿ ದಿಲೀಪ್ ಕಾಳೆ ವಾಸಿಸುತ್ತಿದ್ದಾರೆ. ಅಂದಿನಿಂದ ಇಂದಿನವರಗೂ ಯಾವುದೇ ಮನಸ್ತಾಪಗಳಿಲ್ಲದೇ ಬದುಕುತ್ತಿದ್ದೇವೆ. ಅವರು ಬಂದು ನಮಾಜ್ ಮಾಡಲು ಬಂದು ಸ್ಥಳ ಕೇಳಿದಾಗ ನಾನು ಸಂತೋಷದಿಂದ ಒಪ್ಪಿದ್ದೇನೆ.ಇವರೆಲ್ಲರೂ ನನ್ನ ಜನ ಎಂದು ದಿಲೀಪ್ ಕಾಳೆ ಹೇಳಿದ್ದಾರೆ.

Write A Comment