ಶ್ರೀನಗರ: ಭಾರತೀಯ ಗಡಿ ಭದ್ರತಾ ಯೋಧರು ಮತ್ತು ಉಗ್ರರ ನಡುವೆ ಬುಧವಾರ ಮುಂಜಾನೆ ಕಾಶ್ಮೀರ- ಪಾಕ್ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇಬ್ಬರು ಭಾರತೀಯ ಯೋಧರು ಗಾಯಗೊಂಡಿದ್ದಾರೆ.
ಉತ್ತರ ಕಾಶ್ಮೀರದ ತಂಗ್ವಾರ್ಗ್ನ ಕುಂಝುರ್ನಲ್ಲಿ ಉಗ್ರರು ನುಸುಳಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಯೋಧರು ಮುಂಜಾನೆ 7. 45ಕ್ಕೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಉಗ್ರನೊಬ್ಬ ಹತ್ಯೆಯಾಗಿದ್ದಾನೆ. ಗಾಯಗೊಂಡಿರುವ ಯೋಧರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮತ್ತೆ ಕೆಲವು ಉಗ್ರರು ಸ್ಥಳದಲ್ಲಿ ಅಡಗಿರುವ ಶಂಕೆ ಇದ್ದು ಯೋಧರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.