ಕನ್ನಡ ವಾರ್ತೆಗಳು

ಯೆನೆಪೊಯ ವಿಶ್ವವಿದ್ಯಾನಿಲಯ : ಪ್ರಪ್ರಥಮ ಫ್ಯಾಕ್ಟರಿ ನಿರ್ಮಿತ ಮೆರಿಡಿಯೆನ್ ವಸತಿ ಸಮುಚ್ಚಯ ಉದ್ಘಾಟನೆ

Pinterest LinkedIn Tumblr

Yenopoya_VV_Newbuilg

ಮಂಗಳೂರು, ಅ.22: ಯೆನೆಪೊಯ ವಿಶ್ವವಿದ್ಯಾನಿ ಲಯದ ವಿದ್ಯಾರ್ಥಿ ಮತ್ತು ಸಿಬ್ಬಂದಿಗಾಗಿ ಕೆಇಎಫ್ ಇನ್ಫ್ರಾ ನಿರ್ಮಿಸಿದ ಭಾರತದ ಪ್ರಪ್ರಥಮ ಫ್ಯಾಕ್ಟರಿ ನಿರ್ಮಿತ ಮೆರಿಡಿ‘ಯೆನ್’ ವಸತಿ ಸಮುಚ್ಚಯವನ್ನು ಬುಧವಾರ ವಿವಿಗೆ ಹಸ್ತಾಂತರಿಸಲಾಯಿತು.

ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲ ಯದ ಆವರಣದಲ್ಲಿ ನಿರ್ಮಾಣಗೊಂಡಿರುವ ಈ ವಿನೂತನ ವಸತಿ ಸಮುಚ್ಚಯದ ಉದ್ಘಾಟನೆಯನ್ನು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.

ಆರೋಗ್ಯ ಸಚಿವ ಯು.ಟಿ.ಖಾದರ್‌ರವರು ಕೆಇಎಫ್ ಸುದ್ದಿ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ವಿವಿಯ ಎನ್‌ಡುರೆನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರ್, ಕೆಇಎಫ್‌ನ ವಿನೂತನ ತಂತ್ರಜ್ಞಾನ ಆಧಾರಿತ ನಿರ್ಮಾಣ ಕಾರ್ಯವು ಅತ್ಯಂತ ಪ್ರೇರ ಣಾದಾಯಕವಾಗಿದೆ. ಸಂಸ್ಥೆಯಿಂದ ಇನ್ನಷ್ಟು ಗುಣ ಮಟ್ಟದ ಕಟ್ಟಡಗಳು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ತುಂಬೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್, ಯೆನೆಪೊಯ ಗ್ರೂಪ್‌ನ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಮೊದಲಾದವರು ಉಪಸ್ಥಿತರಿದ್ದು ಶುಭ ಕೋರಿದರು. ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ ಅಧ್ಯಕ್ಷ ಡಾ.ಸಿ.ಪಿ. ಹಬೀಬ್ ರಹ್ಮಾನ್, ಜಿಲ್ಲಾ ವಕ್ಫ್ ಸಲಹಾ ಸಮಿ ತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಮೊದಲಾದವರು ಉಪಸ್ಥಿತರಿದ್ದರು.

ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಸಮಾರಂ ಭದ ಅಧ್ಯಕ್ಷತೆ ವಹಿಸಿದ್ದರು. ಕೆಇಎಫ್ ಇನ್ಫ್ರಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಆ್ಯಂಡ್ರೆ ಡೈನ್‌ಸ್ಟ್ ತಮಿಳು ನಾಡಿನ ಕೃಷ್ಣಗಿರಿಯಲ್ಲಿರುವ ಸಂಸ್ಥೆಯ ಪ್ರಥಮ ಕೈಗಾರಿಕಾ ಪಾರ್ಕ್‌ನ ಕಾರ್ಯ ನಿರ್ವಹಣೆ ಕುರಿತು ವೀಡಿಯೊ ಮೂಲಕ ಮಾಹಿತಿ ನೀಡಿದರು.

ಸದನದಲ್ಲಿ ಪ್ರಸ್ತಾಪ: ಐವನ್ ಸರಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ ಎರಡರಿಂದ ಐದು ವರ್ಷಗಳ ಅವಧಿ ಯಲ್ಲಿ ಮೊದಲು ಅಂದಾಜಿಸಿದ್ದ ಬಜೆಟ್ ಕಟ್ಟಡ ನಿರ್ಮಾಣವಾಗುವ ವೇಳೆಗೆ ದುಪ್ಪ ಟ್ಟುಗೊಂಡಿರುತ್ತದೆ. ಇದರಿಂದ ಹಣ ಪೋಲಾಗುವುದರ ಜೊತೆಗೆ ನಿಗದಿತ ಸಮಯದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಗಳನ್ನು ಒದಗಿಸಲಾಗುವುದಿಲ್ಲ. ಇಂತಹ ಸಂದರ್ಭ ದಲ್ಲಿ ಕಡಿಮೆ ಸಮಯದಲ್ಲಿ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸುವ ಕೆಇಎಫ್ ಇನ್ಫ್ರಾದ ತಂತ್ರಜ್ಞಾನದ ಕುರಿತಂತೆ ಸದನದಲ್ಲಿ ಪ್ರಸ್ತಾಪಿಸಿ ಲೋಕೋಪಯೋಗಿ ಇಲಾಖೆಯ ಸಚಿವರ ಗಮನಸೆಳೆಯುವ ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

Write A Comment