ಕುಶಾಲನಗರ/ಮಡಿಕೇರಿ: ಕೇಂದ್ರ ಕಾನೂನು ಮಂತ್ರಿ ಸದಾನಂದ ಗೌಡ ಮತ್ತು ಡಾಟಿ ದಂಪತಿ ಪುತ್ರ ಕಾರ್ತೀಕ್ ಗೌಡ ಅವರ ವಿವಾಹವು ಕಾಫಿ ಬೆಳೆಗಾರರಾದ ಕೂಡಕಂಡಿ ನಾಣಯ್ಯ– ಸುಧಾ ದಂಪತಿ ಪುತ್ರಿ ರಾಜಶ್ರೀ (ಸ್ವಾತಿ) ಅವರೊಂದಿಗೆ ಶುಕ್ರವಾರ ಕುಶಾಲನಗರದಲ್ಲಿ ನೆರವೇರಿತು.
ರಾಜ್ಯಪಾಲ ವಜೂಭಾಯಿ ರೂಡಾಬಾಯಿ ವಾಲಾ, ಕೇಂದ್ರ ಸಚಿವೆ ಮೇನಕಾ ಗಾಂಧಿ, ಸಂಸದರಾದ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.