ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ದುಬೈ, ಅ.31: ದುಬೈಯ ದೇರಾದ ಅಲ್ ಮುತೀನಾದ ಶೆರಟಾನ್ನಲ್ಲಿ ಶುಕ್ರವಾರದಂದು ಆಯೋಜಿಸಲಾದ ದುಬೈ ದೇವಾಡಿಗಾಸ್ನ 23ನೆ ವಾರ್ಷಿಕ ಸಮ್ಮಿಲನ ಬಹಳ ಅದ್ದೂರಿಯಾಗಿ ನಡೆದಿದ್ದು, ರಸಮಂಜರಿ, ನೃತ್ಯ, ಹಾಸ್ಯಮಯ ಕಾರ್ಯಕ್ರಮವಂತೂ ಭರ್ಜರಿಯಾಗಿತ್ತು.
ದುಬೈ ದೇವಾಡಿಗಾಸ್ನ ಅಧ್ಯಕ್ಷರೂ, ಖ್ಯಾತ ಗಾಯಕರೂ ಹಾಗೂ ದುಬೈಯ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕರೂ ಆಗಿರುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವು ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದಿದ್ದು, ಯುಎಇ, ಮಂಗಳೂರು, ಮುಂಬೈಯ ಮೂಲದ ಗಣ್ಯಾಥಿಗಣ್ಯರು ಪಾಲ್ಗೊಂಡು ಸಮಾರಂಭದ ಮೆರುಗನ್ನು ಹೆಚ್ಚಿಸಿದರು.
ಹರೀಶ್ ಶೇರಿಗಾರ್ ಹಾಗೂ ಅವರ ಸಂಗಡಿಗರ ರಸಮಂಜರಿ, ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಸ್ಯಾಕ್ಸೋಫೋನ್ ವಾದಕಿ ಸಿಂಧು ಭೈರವಿ ಮತ್ತು ಮಚೇಂದ್ರನಾಥ ಮಂಗಳಾದೇವಿ ಅವರ ಸ್ಯಾಕ್ಸೋಫೋನ್ ಜುಗಲ್ಬಂಧಿ, ದೇವಾಡಿಗ ಸಮುದಾಯದ ಕಲಾವಿದರ ನೃತ್ಯ, ಹಾಸ್ಯಮಯ ಪ್ರಹಸನವಂತೂ ನೆರೆದವರ ಮೆಚ್ಚ್ಚುಗೆಗೆ ಪಾತ್ರವಾಯಿತು.
ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ ಸುಮಂಗಲಿಯರು
ಹರೀಶ್ ಶೇರಿಗಾರ್ರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ಸುಜಾತಾ ದೇವಾಡಿಗ, ಸಂಘದ ಸಂಸ್ಥಾಪನಾ ಸದಸ್ಯ ಪದ್ಮವಲ್ಲಿ ಸಂಜಯ್ ದೇವಾಡಿಗ ಸೇರಿದಂತೆ ದೇವಾಡಿಗ ಸಮುದಾಯದ ಸುಮಂಗಲಿಯರು ದೇಪೆ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.
ಮೂವರು ಸಾಧಕರಿಗೆ ಸನ್ಮಾನ
ಅಬುಧಾಬಿಯ ನ್ಯೂ ಮೆಡಿಕಲ್ ಸೆಂಟರ್ ಗ್ರೂಪ್ ಆಫ್ ಕಂಪೆನೀಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಶ್ರೀ ಡಾ.ಬಿ.ಆರ್. ಶೆಟ್ಟಿ , ಖ್ಯಾತ ಉದ್ಯಮಿ ಹಾಗೂ ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಹಾಗೂ ಅವರ ಧರ್ಮಪತ್ನಿ ಸುಜಾತ ದೇವಾಡಿಗ ಹಾಗೂ ಸಂಘದ ಸಂಸ್ಥಾಪನಾ ಸದಸ್ಯ ಪದ್ಮವಲ್ಲಿ ಸಂಜಯ್ ದೇವಾಡಿಗರಿಗೆ ಹರೀಶ್ ಶೇರಿಗಾರ್ರ ಹಾಗೂ ಶರ್ಮಿಳಾ ಶೇರಿಗಾರ್ರ ಸಮ್ಮುಖದಲ್ಲಿ ಪಾಲ್ಗೊಂಡ ಅತಿಥಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಡಾ.ಬಿ.ಆರ್. ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ ಹಾಗೂ ಪದ್ಮವಲ್ಲಿ ಸಂಜಯ್ ದೇವಾಡಿಗ ದುಬೈ ದೇವಾಡಿಗಸ್ನ ಕಾರ್ಯಚಟುವಟಿಕೆಯನ್ನು ಕೊಂಡಾಡಿ, ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸ್ಯಾಕ್ಸೋಫೋನ್ ವಾದಕಿ ಸಿಂಧು ಭೈರವಿ ಹಾಗೂ ಮಚೇಂದ್ರನಾಥ ಮಂಗಳಾದೇವಿಯವರಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಖ್ಯಾತ ವೈದ್ಯ ಡಾ. ಕೆ.ವಿ.ದೇವಾಡಿಗ, ಮಂಗಳೂರಿನ ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಶೆಟ್ಟಿ, ಯುಎಇ ಎಕ್ಸ್ಚೇಂಜ್ನ ಸಿಇಒ ಸುಧೀರ್ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬಾರ್ಕೂರಿನ ಏಕನಾಥೇಶ್ವರಿ ದೇವಾಲಯದ ಟ್ರಸ್ಟಿ ಅಣ್ಣಯ್ಯ ಶೇರಿಗಾರ್, ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಎಚ್. ಮೋಹನ್ದಾಸ್, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಚಿಲ್ಲಿವಿಲ್ಲಿಯ ಸತೀಶ್ ವೆಂಕಟರಮಣ, ಯುಎಇ ಮೊಗವೀರ ಸಂಘ ಹಾಗೂ ರಕ್ತದಾನ ಶಿಬಿರದ ಆಯೋಜಕರಾಗಿರುವ ಬಾಲಾ ಸಾಲ್ಯಾನ್, ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾಗಿರುವ ಸತೀಶ್ ಪೂಜಾರಿ ಹಾಗೂ ಗಣೇಶ್ ರೈ, ರೇಡಿಯೋ ಸ್ಪೈಸ್ನ ಹರ್ಮನ್ ಲೂಯಿಸ್, ಡಾ.ವೀಣಾ ದೇವಾಡಿಗ, ದೈಜಿವರ್ಲ್ಡ್ನ ವಾಲ್ಟರ್ ನಂದಳಿಕೆ ಭಾಗವಹಿಸಿದ್ದರು.
ದೇವಾಡಿಗ ಸಂಘದ ಸಲಹೆಗಾರರಾದ ನಾರಾಯಣ ದೇವಾಡಿಗ, ಆನಂದ ದೇವಾಡಿಗ ಹಾಗೂ ಹರೀಶ್ಚಂದ್ರ ದೇವಾಡಿಗ ಈ ವೇಳೆ ಹಾಜರಿದ್ದರು.
ಸೊಗಸಾದ ಹಳೆಯ ಹಾಡು…ಕುಣಿದು ಕುಪ್ಪಳಿಸುವಂತೆ ಮಾಡಿದ ನೃತ್ಯ…ನಕ್ಕುನಗಿಸಿದ ಹಾಸ್ಯ ಪ್ರಹಸನ
ಗಾಯಕರಾದ ಹರೀಶ್ ಶೇರಿಗಾರ್, ವಿಜಯ ಭಟ್, ಅಕ್ಷತಾ ರಾವ್, ಸುರೇಶ್ ದೇವಾಡಿಗ, ಅಶೋಕ್ ಮಂಕುದೆೆ, ಪ್ರಮೋದ್ ಶ್ರಿಯಾನ್ ಸೇರಿದಂತೆ ಹಲವು ಗಾಯಕರು ತಮ್ಮ ಸುಮಧುರ ಕಂಠದಿಂದ ಹಾಡುವ ಮೂಲಕ ನೆರೆದವರ ಮನರಂಜಿಸಿದರು. ಹರೀಶ್ ಶೇರಿಗಾರ್, ವಿಜಯ ಭಟ್ ಹಾಗೂ ಅಕ್ಷತಾ ರಾವ್ ಅವರು ಹಳೆಯ ಕನ್ನಡಚಿತ್ರಗಳ ಸುಮಧುರ ಹಾಡುಗಳನ್ನು ಸುಸ್ರಾವ್ಯವಾಗಿ ಹಾಡಿ ಮನಸ್ಸನ್ನು ಮುದಗೊಳಿಸಿದರು. ಇದಕ್ಕೂ ಮೊದಲು ಸ್ಯಾಕ್ಸೋಫೋನ್ ವಾದಕಿ ಸಿಂಧು ಭೈರವಿ ಹಾಗೂ ಮಚೇಂದ್ರನಾಥ ಮಂಗಳಾದೇವಿ ಅವರ ಸ್ಯಾಕ್ಸೋಫೋನ್ ಜುಗಲ್ಬಂಧಿ ಅದ್ಭುತವಾಗಿ ಮೂಡಿಬಂತು.
ಅರುಣ್ ಮಣಿಪಾಲ, ಜೇಶ್ ಬಾಯಾರಿ, ಸಂದೀಪ್ ದೇವಾಡಿಗ ಹಾಗೂ ಅವರ ತಂಡದವರು ನಡೆಸಿಕೊಟ್ಟ ‘ಕುಳೆ ರಿಟರ್ನ್ಸ್’ ಹಾಸ್ಯ ಪ್ರಹಸನ ಹಾಗೂ 2014ರಲ್ಲಿ ದುಬೈಯಲ್ಲಿ ನಡೆದ ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆಯ ರನ್ನರ್ಸ್ ಆಗಿ ಮೂಡಿಬಂದ ವಿನ್ಸಂಟ್ ಹಾಗೂ ಅವರ ತಂಡದವರ ಹಾಸ್ಯಪ್ರಹಸನ ನಕ್ಕುನಗಿಸುವಂತೆ ಮಾಡಿತು. ಇದೇ ವೇಳೆ ದೇವಾಡಿಗ ಸಂಘದ ಮಹಿಳೆಯರು, ಮಕ್ಕಳು ಹಾಗೂ ನವೀನ್ ದೇವಾಡಿಗ ತಂಡದವರು ಸೇರಿದಂತೆ ವಿವಿಧ ತಂಡಗಳು ನಡೆಸಿಕೊಟ್ಟ ಮನಮೋಹಕ ನೃತ್ಯವಂತೂ ಬಹಳಷ್ಟು ಚೆನ್ನಾಗಿ ಮೂಡಿಬಂತು. ದೇವಾಡಿಗ ಸಮುದಾಯದವರೇ ಆಯೋಜಿಸಿದ್ದ ಫ್ಯಾಶನ್ ಷೋ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೆ ನಡೆದ ರಸಮಂಜರಿಗೆ ಟ್ರಾಕ್ ಮ್ಯೂಸಿಕ್ಗೆ ಪ್ರತೀಕ್ ದೇವಾಡಿಗ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಲಕ್ಕಿಡ್ರಾದ ಆಕರ್ಷಕ ಬಹುಮಾನವನ್ನು ವಿಜೇತರಿಗೆ ನೀಡಲಾಯಿತು.
ಸಮಾರಂಭದ ಆರಂಭದಲ್ಲಿ ರಾಮಚಂದ್ರ ಕಾಸರಗೋಡು ಪ್ರಾರ್ಥಿಸಿದರು. ಶ್ವೇತಾ ಅಮಿತ್ ಶೇರಿಗಾರ್ ಸ್ವಾಗತ ನೃತ್ಯ ಮಾಡಿದರು. ದೀಪಕ್ ಮರೋಳಿ, ನಿಧಿ ಉಳ್ಳಾಲ್,ದಿನೇಶ್ ಕುಮಾರ್ ದೇವಾಡಿಗ, ಲಕ್ಷ್ಮಿದಾಸ್ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ರಮೇಶ್ ದೇವಾಡಿಗ ಹಾಜರಿದ್ದರು.
4 Comments
So many talents and excellence on one stage…wow… congratulations. In this 23 years of journey you have shown variety of Indian culture to middle east. Bringing so many people is a great task. President Harish Sherigar and all the board members cheers and best wishes.
Dear Mr. Harish Sherigar, Mrs. Sharmila Sherigar, Committee
members, Well-wishers…Hearty Congratulations !!!
It was a great gathering, prominent personalities from UAE,Guests from India, clubbed with mesmerizing saxophone performance, with good dance numbers, skits, songs…..,overall a wholesome family entertainment.
The video presentation at the start of the program was fabulous, the old song medley was a unique concept & it really took all of us back to that golden era. Also, the conclusion of the program, the Sherigar’s coming to the stage etc. was great…
It was great to see the kids & the adults giving amazing performances throughout the program. All efforts put by the organizers, choreographers, performers & supporting members made this event a remarkable one.
It was a much-awaited program filled with variety of entertainment which captured the hearts of the full house audience who gathered to witness the Devadiga Annual gala function. We were entertained to the maximum by the versatile & enchanting singers, power house Daughter–father duo Jugal bandi/classical fusion saxophone performance, hilarious skits,mind-blowing kids dance, sensational ladies dance and attractive fashion show kept all of us glued to our seats. Overall well organized & spectacular show. Thank you.