ಕರ್ನಾಟಕ

ದೈಹಿಕ ಸಂಪರ್ಕ ನಿರಾಕರಿಸುತ್ತಿರುವ ಪತ್ನಿಯಲ್ಲಿ ಗಂಡಿನ ಲಕ್ಷಣಗಳಿದೆ ಎಂದು ವಿಚ್ಛೇದನ ಕೇಳಿದ ಪತಿ ! ಮದುವೆಯಾದ ನಂತರ ನಡೆದಿದ್ದೀನು …? ಇಲ್ಲಿದೆ ಓದಿ…

Pinterest LinkedIn Tumblr

mmm

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಖಾಸಗಿ ಬ್ಯಾಂಕ್‌ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿರುವ ವ್ಯಕ್ತಿಯೊಬ್ಬರು, ತಮ್ಮ ಪತ್ನಿಯಲ್ಲಿ ಗಂಡಿನ ಲಕ್ಷಣಗಳಿದ್ದು, ಪ್ಯಾಡೆಡ್ ಬ್ರಾ ಧರಿಸುತ್ತಾಳೆ, ದೈಹಿಕ ಸಂಪರ್ಕ ನಿರಾಕರಿಸುತ್ತಿದ್ದಾಳೆ ಎಂದು ಆರೋಪಿಸಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೆಂಗೇರಿ ಸೆಟಲೈಟ್ ಟೌನ್ ನಿವಾಸಿ, ಎಂಬಿಎ ಪದವೀಧರ 35 ವರ್ಷದ ಸೋಹನ್(ಹೆಸರು ಬದಲಿಸಲಾಗಿದೆ) ಎಂಬುವವರು 2009ರಲ್ಲಿ ಬನಶಂಕರಿ ಮೂಲದ ವೈದ್ಯರೊಬ್ಬರ ಪುತ್ರಿ ಸ್ವಪ್ನ(ಹೆಸರು ಬದಲಿಸಲಾಗಿದೆ)ರೊಂದಿಗೆ ಮದುವೆಯಾಗಿದ್ದರು. ಆದರೆ ಇದೀಗ ಪತ್ನಿ ದೈಹಿಕ ಸಂಪರ್ಕಕ್ಕೆ ನಿರಾಕರಿಸುತ್ತಿದ್ದಾರೆ. ಪತ್ನಿ ಹೆಣ್ಣೇ ಅಲ್ಲ ಎಂದು ಆರೋಪಿಸಿ, ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸ್ಟಾರ್ ಹೋಟೆಲ್‌ವೊಂದರಲ್ಲಿ ನಮ್ಮ ಮದುವೆ ನಿಶ್ಚಯವಾಗಿತ್ತು. ‘ಮದುವೆಯಾದ ಮೊದಲ ರಾತ್ರಿಯೇ ಪ್ರಸ್ತ ಮಾಡಿಕೊಳ್ಳಲು ನನಗೆ ಭಯವಾಗುತ್ತಿದೆ ಎಂದು ಪತ್ನಿ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ್ದಾಗ ನನಗೆ ಆಘಾತವಾಗಿತ್ತು. ಆದರೂ ನಾನು ಆ ದಿನ ಬಲವಂತ ಮಾಡಲಿಲ್ಲ’ ಎಂದು ಸೋಹನ್ ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.

ಕೆಲವು ದಿನಗಳ ನಂತರ ಒಂದು ದಿನ ರಾತ್ರಿ ಅವಳ ಸಮತಟ್ಟಾದ ಎದೆ ನೋಡಿ ಮತ್ತೊಮ್ಮೆ ನಾನು ಆಘಾತಕ್ಕೆ ಒಳಗಾಗಿದ್ದೆ ಎಂದು ಸೋಹನ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಎರಡು ಬಾರಿ ಹನಿಮೂನ್‌ಗೆ ತೆರಳಿದ್ದಾಗಲೂ ಪತ್ನಿ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಲು ನಿರಾಕರಿಸಿದ್ದು, ತಾನು ಇದುವರೆಗೂ ಅವಳೊಂದಿಗೆ ದೈಹಿಕ ಸಂಪರ್ಕ ಹೊಂದಿಲ್ಲ. ಗಂಡಿನ ಗುಣಲಕ್ಷಣಗಳುಳ್ಳ ಹೆಣ್ಣನ್ನು ಮದುವೆಯಾಗುವ ಮೂಲಕ ನಾನು ಮೋಸ ಹೋಗಿದ್ದೇನೆ. ಹೀಗಾಗಿ ನನಗೆ ವಿಚ್ಛೇದನ ನೀಡಬೇಕು ಎಂದು ಸೋಹನ್ ಮನವಿ ಮಾಡಿದ್ದಾರೆ.

Write A Comment