ಮನೋರಂಜನೆ

ಕಿಚ್ಚ ಸುದೀಪ್ ಜೊತೆ ಸಿನೆಮಾ ಮಾಡುತ್ತಾರಂತೆ ಪ್ರಿಯಾಮಣಿ ! ಇನ್ನೇನು ಹೇಳಿದ್ರು…ನೀವೇ ಓದಿ…

Pinterest LinkedIn Tumblr

sudip

ಬಾಲಿವುಡ್‌ನಲ್ಲೂ ಅಭಿನಯಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಅವರು ಇದೀಗ ನಿರ್ದೇಶನದತ್ತ ಗಮನ ಹರಿಸಿದ್ದಾರೆ. ಹೌದು, ಮಲೆಯಾಳಿ ಬೆಡಗಿ ಬಿಗ್‌ಬಾಸ್ ಸೀಸನ್ 3ರಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪ್ರಿಯಾಮಣಿಗೆ, ಕಿಚ್ಚ ಸುದೀಪ್ ಅವರು ನಿರ್ದೇಶಕಿಯಾಗುವ ಬಯಕೆ ಇದೆಯೇ ಎಂದು ಪ್ರಶ್ನಿಸಿದರು.

ಹೌದು, ನನಗೂ ನಿರ್ದೇಶನದ ಬಗ್ಗೆ ತುಂಬಾ ಆಸಕ್ತಿ ಇದೆ, ನೀವು ಯೆಸ್ ಎಂದರೆ, ನಿಮ್ಮೊಂದಿಗೆ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಮಾಡಬೇಕು ಅಂದುಕೊಂಡಿದ್ದೇನೆ ಎಂದರು. ಇದಕ್ಕೆ ಹಾಸ್ಯಮಯವಾಗಿಯೇ ಉತ್ತರಿಸಿದ ಸುದೀಪ್, ಪೇಮೆಂಟ್ ಕೊಟ್ಟರೆ ಓಕೆ ಎಂದರು.

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸಿನಿಮಾ ರಂಗಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಮಲೆಯಾಳಿ ಬೆಡಗಿ, ಇತ್ತೀಚಿಗೆ ಕಿರುತೆರೆ ರಿಯಾಲಿಟಿ ಷೋನಲ್ಲೂ ಜಡ್ಜ ಆಗಿ ಕೆಲಸ ಮಾಡಿದ್ದಾರೆ. ಈಗ ಯೋಗರಾಜ್ ಭಟ್ ಅವರೊಂದಿಗೆ ‘ದನಕಾಯೋ(ನೊ)’ತಿದ್ದಾರೆ.

Write A Comment