ಕ್ಯಾಲಿಫೋರ್ನಿಯಾ: ಮೆಚ್ಚಿದ ಮಡದಿಗೆ, ಗೆಳತಿಗೆ, ಬಾಳ ಸಂಗಾತಿಗೆ ದುಬಾರಿ ಉಡುಗೊರೆ ನೀಡಿ ಸಂತಸಪಡಿಸುತ್ತಾರೆ. ಅದರೆ ಎಲ್ಲದರೂ ಪ್ರೀತಿ ಪಾತ್ರರಿಗೆ ಹಲ್ಲಿನ ಉಂಗುರ ಮಾಡಿಸಿರುವುದನ್ನು ನೋಡಿದ್ದೀರಾ?
ಅರೆ ಹಲ್ಲಿನ ಉಂಗುರ ಎಂದು ಆಶ್ಚರ್ಯ ಪಡಬೇಡಿ. ಕ್ಯಾಲಿಫೋರ್ನಿಯಾದ ನಿವಾಸಿ ಲುಕಸ್ ಎಂಬಾತ ತನ್ನ ಮನದನ್ನೆ ಕಾರ್ಲಿಗೆ ತನ್ನ ಹಲ್ಲಿನಲ್ಲಿ ಮಾಡಿಸಿದ ವಿಶೇಷ ಉಂಗುರವನ್ನು ಮದುವೆಗೆ ತೊಡಿಸಿದ್ದಾನೆ.
ಮದುವೆಗೆ ಮುನ್ನ ಕಾರ್ಲಿಗೆ ವಿಶೇಷ ಉಡುಗೊರೆ ನೀಡಬೇಕೆಂದುಕೊಂಡಿದ್ದ ಲುಕಸ್ ತನ್ನ ದವಡೆ ಹಲ್ಲನ್ನು ಕೀಳಿಸಿ ಅದನ್ನು ಜುವೆಲ್ಲರಿ ಅಂಗಡಿಯಲ್ಲಿ ಪ್ಲಾಟಿನಂ ಮೂಲಕ ವಿಶೇಷವಾಗಿ ವಿನ್ಯಾಸಗೊಳಿಸಿ ಉಂಗುರವನ್ನು ತಯಾರಿಸಿದ್ದಾನೆ. ವಜ್ರದ ಉಂಗುರ ತೊಡಿಸಬೇಕೆಂದುಕೊಳ್ಳುವ ಈ ಕಾಲದಲ್ಲಿ ಲುಕಸ್ ಮಾತ್ರ ಹಲ್ಲಿರುವ ಉಂಗುರವನ್ನು ನೀಡುವ ಮೂಲಕ ಸುದ್ದಿಯಾಗಿದ್ದಾನೆ.