ಮಂಗಳೂರು, ನ.19: ಅಖಿಲ ಭಾರತ 62ನೆ ಸಹಕಾರಿ ಸಪ್ತಾಹದ ಅಂಗವಾಗಿ ಸಹಕಾರಿ ಮಾರುಕಟ್ಟೆ, ಸಂಸ್ಕರಣೆ ಮತ್ತು ವೌಲ್ಯವಧರ್ನೆ ದಿನ ಆಚರಣೆಯ ಅಂಗವಾಗಿ ಬುಧವಾರ ದ.ಕ. ಹಾಲು ಉತ್ಪಾದಕರ ಒಕ್ಕೂಟವು ‘ನಂದಿನಿ’ ನೂತನ ಮಜ್ಜಿಗೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಕುಲಶೇಖರದ ಮಂಗಳೂರು ಡೇರಿ ಆವರಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಸಂಸದ ನಳಿನ್‌ಕುಮಾರ್ ಕಟೀಲ್, ದ.ಕ. ಜಿಲ್ಲೆಯ ಸಹಕಾರಿ ಚಳವಳಿ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಸಮೃದ್ಧ ಗ್ರಾಮಗಳು ಸಶಕ್ತ ಭಾರತ ನಿರ್ಮಾಣಕ್ಕೆ ಆಧಾರ ಎಂಬ ಕಲ್ಪನೆಯಲ್ಲಿ ಬಳ್ಪ್ಪ ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲಿ ಮನೆಗೊಂದು ದನ, ಅದರ ಗೊಬ್ಬರ ದಿಂದ ಸಾವಯವ ಕೃಷಿ, ಅದರಿಂದ ಗ್ಯಾಸ್ ಉತ್ಪಾದನೆ, ವಿದ್ಯುತ್ ಉತ್ಪಾದನೆಯ ಮೂಲಕ ಗೋಶಕ್ತಿ ಆಧಾರಿತ ಸ್ವಾವಲಂಬಿ ಗ್ರಾಮ ನಿರ್ಮಾಣಕ್ಕೆ ಡಿಸಿಸಿ ಹಾಗೂ ಕೆಎಂಎ್ ಕೂಡಾ ಕೈಜೋಡಿಸಬೇಕು ಎಂದು ಅವರು ಈ ಸಂದರ್ಭ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಮಾತನಾಡಿ, 681 ಹಾಲು ಉತ್ಪಾದಕರ ಸಹಕಾರಿ ಸಂಘ ಗಳಲ್ಲಿ 181 ಮಹಿಳಾ ಸಂಘಗಳು ಕಾರ್ಯಾಚರಿಸುತ್ತಿದ್ದು, ಇನ್ನಷ್ಟು ಮಹಿಳಾ ಸಂಘಗಳಿಗೆ ಒತ್ತು ನೀಡುವ ಮೂಲಕ ಹಾಲು ಉತ್ಪಾದನಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಮಣಿಪಾಲ ಮಾಹೆಯ ಮಾಜಿ ಉಪ ಕುಲಪತಿ ಪದ್ಮಭೂಷಣ ಡಾ.ಬಿ.ಎಂ. ಹೆಗ್ಡೆ, ಸಾಂಪ್ರದಾಯಿಕ ಶೈಲಿಯಲ್ಲಿ ಹೆಪ್ಪು ಹಾಕಿ ಕಡೆದು ತಯಾರಿಸಿದ ಮಸಾಲೆರಹಿತ ನಂದಿನಿ ಮಜ್ಜಿಗೆಯನ್ನು ಬಿಡುಗಡೆಗೊಳಿಸಿ, ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಹಾನಿ ಇಲ್ಲದ ಪೇಯ ಮಸಾಲೆರಹಿತ ಮಜ್ಜಿಗೆ ಎಂದು ಹೇಳಿದರು.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿ ಯನ್ ಅಧ್ಯಕ್ಷ ಹರೀಶ್ ಆಚಾರ್, ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಕೆ.ಎಂ.ಕೃಷ್ಣ ಭಟ್, ಪದ್ಮನಾಭ ಶೆಟ್ಟಿ, ಜಾನಕಿ ಹಂದೆ, ಸುಚರಿತ ಶೆಟ್ಟಿ ಹಾಗೂ ಸಾವಿತ್ರಿ ರೈ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.