ರಾಷ್ಟ್ರೀಯ

ಮತ್ತೆ ಚೆನ್ನೈಗೆ ವಕ್ಕರಿಸಿದ ಮಳೆ: ಸಂಕಷ್ಟದಲ್ಲಿ ಜನತೆ

Pinterest LinkedIn Tumblr
Chennai: Staffs and visitors move from a flooded Government hospital after heavy rains in Chennai on Tuesday. PTI Photo by R Senthil Kumar (PTI12_1_2015_000357B)
Chennai: Staffs and visitors move from a flooded Government hospital after heavy rains in Chennai on Tuesday. PTI Photo by R Senthil Kumar (PTI12_1_2015_000357B)

ಚೆನ್ನೈ: ಕುಂಭದ್ರೋಣ ಮಳೆಯಿಂದಾಗಿ ಈಗಾಗಲೇ ತತ್ತರಿಸಿಹೋಗಿರುವ ತಮಿಳುನಾಡಿನಲ್ಲಿ ಇದೀಗ ಮತ್ತೆ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಚೆನ್ನೈನಾದ್ಯಂತ ತುಂತುರು ಮಳೆಯಾಗುತ್ತಿರುವುದಾಗಿ ಬುಧವಾರ ತಿಳಿದುಬಂದಿದೆ.

ತಮಿಳುನಾಡಿದ ಕರಾವಳಿ ತೀರ ಪ್ರದೇಶ, ಚೆನ್ನೈ ಕನ್ಯಾಕುಮಾರಿ, ಮಧುರೈ, ತಿರುನಲ್ವೇಲಿ ಜಿಲ್ಲೆ ಸೇರಿದಂತೆ ದಕ್ಷಿಣಭಾಗದ ಜಿಲ್ಲೆಗಳಲ್ಲಿ ಡಿಸೆಂಬರ್ 11 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಳೆಯ ಎಚ್ಚರಿಕೆಯಿಂದಾಗಿ ಈಗಾಗಲೇ ಮುಂಜಾಗ್ರತೆ ವಹಿಸಿರುವ ದಕ್ಷಿಣ ವಲಯ ರೈಲ್ವೆ ವಿಭಾಗವು ಮುಂಬೈ, ಗುಜರಾತ್ ಹಾಗೂ ದೆಹಲಿಗೆ ತೆರಳಬೇಕಿದ್ದ ರೈಲುಗಳ ಓಡಾಟವನ್ನು ರದ್ದು ಮಾಡಿದ್ದಾರೆ. ಅಲ್ಲದೆ, ತಮಿಳುನಾಡಿನ 8 ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.

Write A Comment