ಕರ್ನಾಟಕ

ದೊಡ್ಡಗೌಡರಿಗೇ ಟಾಂಗ್ ನೀಡಿದ ಚಲುವರಾಯಸ್ವಾಮಿ ! ಜೆಡಿಎಸ್ ನಲ್ಲಿ ಭಿನ್ನಮತ ಉಲ್ಬಣ

Pinterest LinkedIn Tumblr

cheluvaraya

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪಕ್ಷದೊಳಗೆ ತಲೆದೋರಿದ್ದ ಗೊಂದಲ ಶಮನವಾದ ಬಳಿಕ ಮತೆತ ಜೆಡಿಎಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ. ವಿಧಾನಪರಿಷತ್ ಚುನಾವಣೆ ರಂಗೇರತೊಡಗಿದಂತೆ ರಾಜ್ಯ ರಾಜಕೀಯ ಪಕ್ಷದೊಳಗಿನ ಬಿಕ್ಕಟ್ಟು ಉಲ್ಬಣಿಸತೊಡಗಿದೆ.

ವಿಧಾನಪರಿಷತ್ ಗೆ ಅಭ್ಯರ್ಥಿ ಆಯ್ಕೆ ಕುರಿತಂತೆ ಜೆಡಿಎಸ್ ನಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ. ಹೀಗಾಗಿ ಶಾಸಕ ಚೆಲುವರಾಯಸ್ವಾಮಿ ವರಿಷ್ಠರಿಗೇ ಟಾಂಗ್ ನೀಡಿದ್ದಾರೆ. ಮೊನ್ನೆಯಷ್ಟೇ ಗೊಂದಲ ಬೇಡ, ಒಗ್ಗಟ್ಟಿನಿಂದ ಇರೋಣ ಎಂದಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನನ್ನ ವಿರುದ್ಧ ಸಮರ ಸಾರಿದಂತೆ ಕಾಣಿಸುತ್ತಿದೆ. ಇದೀಗ ದೇವೇಗೌಡರೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ.

ನನ್ನ ಕ್ಷೇತ್ರ ನಾಗಮಂಗಲದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮತ್ತೆ ಆಟ ಆಡುವಂತೆ ಕಾಣುತ್ತಿದೆ. ಮಂಡ್ಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಹೀಗಾದರೆ ಪಕ್ಷದೊಳಗೆ ಬಿಕ್ಕಟ್ಟು ಹೆಚ್ಚಾಗಲಿದೆ ಎಂದು ಹೇಳಿದರು.

ಇನ್ನು ಈ ಸಂಬಂಧ ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಂಡ್ಯದ ಜನತೆಯ ಒಕ್ಕೊರಲಿನ ಅಭಿಪ್ರಾಯದಂತೆ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ, ಅಭ್ಯರ್ಥಿ ಆಯ್ಕೆ ವಿಚಾರ ಹಾದಿ ಬೀದಿಯಲ್ಲಿ ಚರ್ಚೆ ಮಾಡುವಂತದಲ್ಲ. ಯಾರೋ ಒಬ್ಬರು ವಿರೋಧ ವ್ಯಕ್ತಪಡಿಸಿದರೇ, ಅದು ಪಕ್ಷದ ಅಭಿಪ್ರಾಯವಲ್ಲ ಎಂದು ಹೇಳಿದ್ದಾರೆ.

Write A Comment