ಕನ್ನಡ ವಾರ್ತೆಗಳು

ಮಂಗಳೂರು ಬಂದರಿನಲ್ಲಿ ಐ ಎನ್ ಎಸ್ ವಿರಾಟ್ : ರಾಜ್ಯಕ್ಕೆ ಕೇಂದ್ರ ಪತ್ರ

Pinterest LinkedIn Tumblr

Ins_veerat_warship

ಮ೦ಗಳೂರು ಡಿಸೆಂಬರ್ 09 : ಮಂಗಳೂರು ಲೋಕ ಸಭಾ ಕ್ಷೇತ್ರದ ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ಐ ಎನ್‌ಎಸ್ ವಿರಾಟ್ ಯುದ್ಧ ನೌಕೆಯನ್ನು ಮಂಗಳೂರು ಬಂದರಿನಲ್ಲಿ ವಿಮಾನ ನೌಕೆ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಉದ್ದೇಶ ಇದೆಯೇ ಎಂಬ ಪ್ರಶ್ನೆಯನ್ನು ಲೋಕಸಭಾ ಅಧಿವೇಶನದಲ್ಲಿ ಹೇಳಿದ್ದರು. ಡಿ.4ರಂದು ಸಂಸತ್ ನಲ್ಲಿ ಹಾಜರಿದ್ದ ರಕ್ಷಣಾ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ಉತ್ತರಿಸಿದ್ದಾರೆ.

ಅವರು ತಮ್ಮ ಉತ್ತರದಲ್ಲಿ ಐ‌ಎನ್‌ಎಸ್ ವಿರಾಟ್ ವಿಮಾನ ವಾಹನವನ್ನು 2016 ರ ಅಂತರರಾಷ್ಟ್ರೀಯ ವಿಮಾನ ಪರಿಶೀಲನಾ ಕಾರ್ಯ ನಂತರಸೇವೆಯಿಂದ ಮುಕ್ತಗೊಳಿಸಲಾಗುವುದು.

ಅಲ್ಲದೆ ಕೇಂದ್ರ ಸರ್ಕಾರ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬರೆದಿರುವ ಪತ್ರವನ್ನು ಪರಿಶೀಲಿಸಿದ್ದು ನವ ಮಂಗಳೂರು ಬಂದರಿನಲ್ಲಿ ಐ ಎನ್ ಎಸ್ ವಿರಾಟ್ ಮೇಲೆ ಏರ್ ಕ್ರಾಫ್ಟ್ ಮ್ಯೂಸಿಯಂನ್ನು ಸ್ಥಾಪಿಸುವ ಇರಾದೆಯನ್ನು ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ದೇಶದ ಇನ್ನೂ ಹಲವಾರು ಕರಾವಳಿ ರಾಜ್ಯ ಸರ್ಕಾರಗಳು ತಮಗೂ ಐ ಎನ್ ಎಸ್ ವಿರಾಟ್‌ನ್ನು ನೀಡಲು ಬೇಡಿಕೆ ಇಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಹಣಕಾಸು ನೆರವಿನ ಬದ್ಧತೆ ಒದಗಿಸುವ ಬಗ್ಗೆ ಕರ್ನಾಟಕ ಸೇರಿದಂತೆ ಆಸಕ್ತ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

Write A Comment