ಅಂತರಾಷ್ಟ್ರೀಯ

ಅಘ್ಘಾನ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ಉಗ್ರರ ದಾಳಿ, 37 ಸಾವು: ರಕ್ಷಣಾ ಸಚಿವಾಲಯ

Pinterest LinkedIn Tumblr

afghanf

ಕಂದಹಾರ್‌: ಅಫ್ಘಾನಿಸ್ತಾನದ ಕಂದಹಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್‌ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 37 ಮಂದಿ ಮೃತಪಟ್ಟಿದ್ದಾರೆ ಮತ್ತು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಅಫ್ಘಾನ್‌ ಸೇನಾಪಡೆ, ನ್ಯಾಟೋ ಪಡೆಗಳು ಹಾಗೂ ವಿಮಾನ ನಿಲ್ದಾಣವನ್ನು ಗುರಿಯಾಗಿರಿಸಿಕೊಂಡು ಉಗ್ರರು ಈ ದಾಳಿ ನಡಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 9 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಸಚಿವಾಲಯ ಹೇಳಿದೆ.

ಸ್ಥಳದಲ್ಲಿ ಅಫ್ಘಾನ್‌ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ. ಕಾರ್ಯಾಚರಣೆ ವೇಳೆ ಯಾವುದೇ ಹೆಚ್ಚಿನ ಹಾನಿ ಸಂಭವಿಸಬಾರದು ಎನ್ನುವಕಾರಣಕ್ಕೆ ವಿಮಾನಗಳ ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿದೆ.

ಆಫ್ಘಾನಿಸ್ತಾನ ಅಭಿವೃದ್ಧಿ ಕುರಿತಾದ”ಏಷ್ಯಾದ ಹೃದಯ’ ಎಂಬ ಬಹುಪಕ್ಷೀಯ ಸಭೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ವೇಳೆಯಲ್ಲೇ ಈ ದಾಳಿ ನಡೆದಿದೆ.

Write A Comment