ಮನೋರಂಜನೆ

ಪುರುಷ ಪ್ರಾಬಲ್ಯದ ಜಗತ್ತು: ನಿಕೋಲ್‌ ಕಿಡ್ಮನ್‌

Pinterest LinkedIn Tumblr

psmec06 nicole-kidman-9

ಅಭಿವೃದ್ಧಿ, ಸಮಾನತೆಯ ಮಾತು ಎಷ್ಟೇ ಕೇಳಿಬರುತ್ತಿದ್ದರೂ ಇಂದಿಗೂ ಈ ಜಗತ್ತಿನಲ್ಲಿ ಪುರುಷ ಪ್ರಾಬಲ್ಯವೇ ಇದೆ ಎಂದಿದ್ದಾರೆ ಹಾಲಿವುಡ್‌ ನಟಿ ನಿಕೋಲ್‌ ಕಿಡ್ಮನ್‌.

‘ಲಿಂಗ ಸಮಾನತೆಯ ಅಗತ್ಯದ ಬಗ್ಗೆ ಕೂಗಿದ್ದರೂ ಪುರುಷರ ಪ್ರಾಬಲ್ಯವೇ ಹೆಚ್ಚಿದೆ. ಅದು ನಿಜ ಕೂಡ. ಅನೇಕರು ಇನ್ನು ಮುಂದೆ ಲಿಂಗ ತಾರತಮ್ಯ ಬೇಡವೇ ಬೇಡ ಎಂದು ಹೇಳುತ್ತಾರೆ. ಆದರೆ ಅದು ಸತ್ಯವಲ್ಲ. ಜಗತ್ತು ಬದಲಾವಣೆಯ ಹಾದಿಯಲ್ಲಿದೆಯೇ ವಿನಾ ಬದಲಾಗಿಲ್ಲ. ಸಮಾನತೆಯ ಆಸೆ ಎಲ್ಲರಲ್ಲೂ ಇದೆ. ಆದರೆ ಆ ದಿಶೆಯಲ್ಲಿ ಸಾಗುವ ದಾರಿ ದೂರವಿದೆ’ ಎಂದಿದ್ದಾರೆ ಅವರು.

ಪುರಷರ ಪ್ರಾಬಲ್ಯವಿದೆ ಎನ್ನುವುದು ನಿಜ ಸಂಗತಿ. ಅದು ವಿವಾದಾತ್ಮಕ ಹೇಳಿಕೆ ಎಂದು ನನಗೆ ಅನ್ನಿಸುವುದಿಲ್ಲ. ಮಹಿಳೆಯರಿಗೂ ಸಮಾನ ಅವಕಾಶ ಬೇಕು. ಪ್ರಾಬಲ್ಯ ಅಳಿದು ಸಮಾನತೆ ಬರಬೇಕಿದೆ. ಆದರೆ ನಿಜ ಸಂಗತಿ ಏನೆಂದರೆ, ಪುರುಷರೇ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಸಮಾನತೆ ಸಾಧ್ಯವಾಯಿತೆಂದಾದರೆ ಈ ಪ್ರಪಂಚದ ರೂಪುರೇಷೆಯೇ ಬೇರೆ ರೀತಿಯಲ್ಲಿರುತ್ತದೆ. ಈ ಬಗ್ಗೆ ಅರಿವು ಮುಖ್ಯ’ ಎಂದಿದ್ದಾರೆ 48ರ ಹರೆಯದ ನಿಕೋಲ್‌.

ಶಿಕ್ಷಣ ಹಾಗೂ ಮಾನವೀಯತೆ ಈ ದಿಶೆಯಲ್ಲಿ ಮುಖ್ಯ ಪಾತ್ರ ವಹಿಸಲಿದೆ ಎನ್ನುವುದು ಅವರ ನಂಬಿಕೆ. ‘ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊರುವುದು, ಅಭಿವೃದ್ಧಿಗೆ ಕಾರಣವಾಗುವುದು ಮಹಿಳೆಯೇ. ಮಹಿಳಾ ಸಮಸ್ಯೆಗೆ ಸಂಬಂಧಿಸಿದಂತೆ ನಾನು ಹೆಚ್ಚು ಮಾತನಾಡುತ್ತೇನೆ. ಯಾಕೆಂದರೆ ಇವುಗಳನ್ನು ಹೇಳಿಕೊಟ್ಟಿದ್ದು ಮಹಿಳಾವಾದಿಯಾದ ನನ್ನ ಅಮ್ಮ. 75 ವರ್ಷವಾದರೂ ಅವರು ಮಹಿಳಾ ಸಮಸ್ಯೆಗೆ ಸ್ಪಂದಿಸಲು ಹಾತೊರೆಯುತ್ತಾರೆ’ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Write A Comment