ಮನೋರಂಜನೆ

ಯಶಸ್ಸು ಪರಿಶ್ರಮದ ಫಲ: ಪ್ರಿಯಾಂಕಾ ಚೋಪ್ರಾ

Pinterest LinkedIn Tumblr

ptrifdhloಯಶಸ್ಸು ಹಣೆಬರಹಕ್ಕೆ ಅಥವಾ ಅದೃಷ್ಟಕ್ಕೆ ಸೀಮಿತವಾದುದಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದು ನಂಬಿದವರು ಪ್ರಿಯಾಂಕಾ ಚೋಪ್ರಾ. ಬಾಲಿವುಡ್‌ ಗಲ್ಲಿಯಲ್ಲಷ್ಟೇ ಅಲ್ಲ, ಹಾಲಿವುಡ್‌ ನೆಲದಲ್ಲೂ ಹೆಸರು  ಮಾಡಿರುವ ಅವರ ಈ ಎಲ್ಲಾ ಯಶಸ್ಸಿನ ಹಿಂದಿರುವುದು ದಿನದ 16 ಗಂಟೆಗಳ ನಿರಂತರ ಪ್ರಯತ್ನ.

‘ಒಮ್ಮೆ ದಕ್ಕಿರುವ ಜನಪ್ರಿಯತೆಯನ್ನು ಉಳಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಸದಾ ಮುನ್ನಡೆಯಲು ನಾನು ದಿನದ 16 ಗಂಟೆ ಕೆಲಸ ಮಾಡುತ್ತೇನೆ. ಹೆಸರು, ಹಣದ ಗಳಿಕೆಯ ಹಿಂದೆ ಬಿದ್ದು ಬ್ಯುಸಿ ಆಗಿರುವ ನನಗೆ ಬದುಕನ್ನು ಖುಷಿಯಿಂದ ಅನುಭವಿಸಲು ಸಮಯವೇ ಇಲ್ಲದಂತಾಗಿದೆ’ ಎಂದಿದ್ದಾರೆ ಪ್ರಿಯಾಂಕಾ.

ಸಿನಿಮಾಪ್ರಿಯ ಭಾರತೀಯರ ಪ್ರೀತಿ ಗಳಿಸಿರುವುದಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿರುವ ಪ್ರಿಯಾಂಕಾ ಅಮೆರಿಕದ ಟಿ.ವಿ. ಕಾರ್ಯಕ್ರಮ ‘ಕ್ವಾಂಟಿಕೊ’ ಮೂಲಕವೂ ಪರಿಚಿತರಾಗಿದ್ದಾರೆ. ‘ಯಶಸ್ಸು ಎನ್ನುವುದು ಹಣೆಬರಹವಲ್ಲ. ಅದೊಂದು ನಿರಂತರ ಪಯಣ. ನಿರಂತರವಾಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸಿದರೆ ಮಾತ್ರ ಯಶಸ್ಸು ಎನ್ನಬಹುದು’ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಹಣ ಸಂಪಾದನೆ ಎಷ್ಟು ಮುಖ್ಯ ಎಂಬ ಬಗ್ಗೆ ಪ್ರಶ್ನೆ ಎತ್ತಿದಾಗ, ‘ಹೌದು, ನಾನು ಚೆನ್ನಾಗಿ ಹಣ ಸಂಪಾದನೆ ಮಾಡುತ್ತೇನೆ. ಕಠಿಣ ಪರಿಶ್ರಮ, ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ಕೆಲವೊಮ್ಮೆ ನಿದ್ದೆಯೂ ಇಲ್ಲದೆ ದಿನದ 16 ಗಂಟೆ ನಿರಂತರವಾಗಿ ಕೆಲಸ ಮಾಡುತ್ತೇನೆ. ನನ್ನ ಪಾಲಿಗೆ ವಾರಾಂತ್ಯವೂ ಇಲ್ಲ, ಹುಟ್ಟುಹಬ್ಬಾಚರಣೆ, ದೀಪಾವಳಿ ಸಂಭ್ರಮವೂ ಇಲ್ಲ’ ಎಂದಿದ್ದಾರೆ ಅವರು.

ಈಗಾಗಲೇ ಹಿಂದಿ ಸಿನಿಮಾಗಳಲ್ಲಿ ಪ್ರಖ್ಯಾತಿ ಪಡೆದಿರುವ ಅವರು, ‘ಮನಸ್ಸಿಗೆ ಖುಷಿ ಕೊಡುವ ಚಿತ್ರಗಳನ್ನು ಮಾಡುತ್ತಲೇ ಇರುತ್ತೇನೆ. ಇನ್ನೊಬ್ಬರಿಗೆ ನಾನೇನು ಎಂದು ತೋರಿಸುವ ಸಲುವಾಗಿ ಸಿನಿಮಾ ಒಪ್ಪಿಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ. ಹಾಲಿವುಡ್‌ ಚಿತ್ರಗಳಲ್ಲಿ ಉತ್ತಮ ಅವಕಾಶ ಬಂದರೆ ನಟಿಸುತ್ತೇನೆ’ ಎಂದಿದ್ದಾರೆ.

Write A Comment